×
Ad

ಭಾರತಕ್ಕೆ ಆಸ್ಟ್ರೇಲಿಯದ ನೂತನ ಹೈಕಮಿಶನರ್ ಹರೀಂದರ್ ಸಿದ್ದು

Update: 2016-02-11 23:26 IST

ಮೆಲ್ಬೋರ್ನ್, ಫೆ. 11: ಮಹಿಳಾ ರಾಜತಾಂತ್ರಿಕ ಅಧಿಕಾರಿ ಹರೀಂದರ್ ಸಿದ್ದು ಅವರನ್ನು ಆಸ್ಟ್ರೇಲಿಯ ಭಾರತದ ತನ್ನ ಮುಂದಿನ ಹೈಕಮಿಶನರ್ ಆಗಿ ಇಂದು ನೇಮಿಸಿದೆ. ಅವರು ಐದು ವರ್ಷಗಳಿಗೂ ಕಡಿಮೆ ಅವಧಿಯಲ್ಲಿ ಭಾರತದಲ್ಲಿ ಆಸ್ಟ್ರೇಲಿಯದ ಪ್ರತಿನಿಧಿಯಾಗಿ ನಿಯೋಜನೆಗೊಂಡ ಎರಡನೆ ಭಾರತೀಯ ಮೂಲದ ಅಧಿಕಾರಿಯಾಗಿದ್ದಾರೆ.
ಇದಕ್ಕೂ ಮೊದಲು ಪೀಟರ್ ವರ್ಗೀಸ್ 2009ರಿಂದ 2012ರವರೆಗೆ ಭಾರತದಲ್ಲಿ ಆಸ್ಟ್ರೇಲಿಯದ ಹೈಕಮಿಶನರ್ ಆಗಿದ್ದರು.
ಹರೀಂದರ್ ಸಿದ್ದು ಅವರ ಕುಟುಂಬದ ಮೂಲ ಪಂಜಾಬ್‌ನಲ್ಲಿದೆ.
‘‘ರಾಜತಾಂತ್ರಿಕನೊಬ್ಬನಿಗೆ ಈ ಕ್ಷಣದಲ್ಲಿ ಭಾರತ ಅತ್ಯಂತ ಆಕರ್ಷಕ ದೇಶಗಳ ಪೈಕಿ ಒಂದಾಗಿದೆ. ಭಾರತದ ಆರ್ಥಿಕತೆಯ ಭವಿಷ್ಯ ಉಜ್ವಲವಾಗಿದೆ ಹಾಗೂ ಅದು ಹೆಚ್ಚು ಪ್ರಭಾವಿ ಮತ್ತು ಸಕ್ರಿಯ ಅಂತಾರಾಷ್ಟ್ರೀಯ ಭಾಗೀದಾರನಾಗಿ ಹೊರಹೊಮ್ಮುತ್ತಿದೆ’’ ಎಂದು ಸಿದ್ದು ಹೇಳಿದರು.
ಸಿದ್ದು ಸಿಂಗಾಪುರದಲ್ಲಿ ಜನಿಸಿದರು. ಬಳಿಕ ಬಾಲ್ಯದಲ್ಲೇ ಅವರ ಕುಟುಂಬ ಆಸ್ಟ್ರೇಲಿಯಕ್ಕೆ ವಲಸೆ ಹೋಯಿತು.
ನಿರ್ಗಮನ ಹೈಕಮಿಶನರ್ ಪ್ಯಾಟ್ರಿಕ್ ಸಕ್ಲಿಂಗ್ ಸ್ಥಾನದಲ್ಲಿ ಅವರ ನೇಮಕವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News