×
Ad

ಗರ್ಭಪಾತ ಕಾನೂನು ಸಡಿಲಿಗೆ ನಾರ್ದರ್ನ್ ಅಯರ್‌ಲ್ಯಾಂಡ್ ತಡೆ

Update: 2016-02-11 23:27 IST

ಲಂಡನ್, ಫೆ. 11: ಉತ್ತರ ಅಯರ್‌ಲ್ಯಾಂಡ್ ಪ್ರಾದೇಶಿಕ ಅಸೆಂಬ್ಲಿ ಬುಧವಾರ ಕಠಿಣ ಗರ್ಭಪಾತ ಕಾನೂನುಗಳನ್ನು ಸಡಿಲಗೊಳಿಸುವ ಮಸೂದೆಯ ವಿರುದ್ಧವಾಗಿ ಮತ ಚಲಾಯಿಸಿದೆ.

ಗರ್ಭಪಾತ ಕಾನೂನು ಮಾನವಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂಬುದಾಗಿ ಬೆಲ್‌ಫಾಸ್ಟ್ ಹೈಕೋರ್ಟ್‌ನೀಡಿದ ತೀರ್ಪಿನ ಹೊರತಾಗಿಯೂ ಸಂಸದರು ತಮ್ಮ ನಿಲುವನ್ನು ಬದಲಿಸಲಿಲ್ಲ.

ಸರಿ ಸುಮಾರು ಮಧ್ಯರಾತ್ರಿಯವರೆಗೆ ನಡೆದ ಚರ್ಚೆಯ ಬಳಿಕ ಮಸೂದೆಯನ್ನು ಮತಕ್ಕೆ ಹಾಕಲಾಯಿತು. ಲೈಂಗಿಕ ಅಪರಾಧಗಳ ಪ್ರಕರಣಗಳಲ್ಲಿ ಹಾಗೂ ಹುಟ್ಟಿದ ಬಳಿಕ ಮಗು ಬದುಕುವ ಯಾವುದೇ ಸಾಧ್ಯತೆಯೂ ಇಲ್ಲದಿರುವ ಪ್ರಕರಣಗಳಲ್ಲಿ ಗರ್ಭಪಾತಕ್ಕೆ ಅವಕಾಶ ನೀಡುವ ಪ್ರಸ್ತಾಪಗಳನ್ನು ಮಸೂದೆಯು ಹೊಂದಿತ್ತು. ಆದರೆ, ಸ್ಟೋರ್ಮಂಟ್ ಅಸೆಂಬ್ಲಿಯ ಸದಸ್ಯರು 59-40 ಮತಗಳ ಅಂತರದಿಂದ ನೂತನ ಮಸೂದೆಯನ್ನು ತಿರಸ್ಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News