ಚೀನದಲ್ಲಿ ಇತಿಹಾಸ ಸೃಷ್ಟಿಸಿದ ಹೈದರಾಬಾದ್‌ನ ವೈಷ್ಣವಿ
ಹೈದರಾಬಾದ್: ಹೈದರಾಬಾದ್‌ನ ವೈಷ್ಣವಿ ಯರಾಗಡ ಹೊಸ ಇತಿಹಾಸವೊಂದನ್ನು ಸೃಷ್ಟಿಸಿದ್ದಾಳೆ. ವೈಷ್ಣವಿ ಚೀನದಲ್ಲಿ ಇಂಟರ್‌ನೇಶನಲ್ ಮಾಸ್ಟರ್ ಆಫ್ ಮೆಮರಿ ಟ್ಯಾಲೆಂಟ್ ಚಾಂಪಿಯನ್‌ಶಿಪ್‌ನಲ್ಲಿ ವಿಜೇತಳಾಗಿದ್ದಾಳೆ. ಈಗ ಅವಳು ಜಗತ್ತಿನ ಎಲ್ಲರಿಗಿಂತಲೂ ವೇಗದ ನೆನಪಿನ ಶಕ್ತಿ ಇರುವ ಬಾಲಕಿಯಾಗಿದ್ದಾಳೆ. ವೈಷ್ಣವಿಗೆ ಇತ್ತೀಚೆಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ 100 ವುಮೆನ್ ಅಚೀವರ್ಸ್ ಅವಾರ್ಡ್ ನೀಡಿ ಗೌರವಿಸಿದ್ದಾರೆ.
ಹೈದರಾಬಾದ್‌ನ ವೈಷ್ಣವಿ ಅತಿ ಕಠಿಣ ಹೆಸರು ಅತಿಕಡಿಮೆ ಬಾರಿ ಕಾಣಿಸಿಕೊಂಡ ಮುಖ, ದೊಡ್ಡ ದೊಡ್ಡ ಸಂಖ್ಯೆ, ಮುಂತಾದುದನ್ನು ಕ್ಷಣಮಾತ್ರದಲ್ಲಿ ನೆನಪಿನಲ್ಲಿಟ್ಟುಕೊಳ್ಳುತ್ತಾಳೆ. ಒಮ್ಮೆ ನೆನಪಾದುದನ್ನು ಅವಳೆಂದೂ ಮರೆಯುವುದಿಲ್ಲ. ಇಂಟರ್‌ನೇಶನಲ್ ಮಾಸ್ಟರ್ ಆಫ್ ಮೆಮರಿ ಟ್ಯಾಲೆಂಟ್ ಚಾಂಪಿಯನ್‌ಶಿಪ್ ಗೆಲ್ಲುವುದಕ್ಕೆ ಒಂದು ಗಂಟೆಯೊಳಗೆ ಒಂದು ಸಾವಿರ ಸಂಖ್ಯೆಯನ್ನು ನೆನಪಿಸಿಕೊಳ್ಳುವುದು ಮುಂತಾದ ಸ್ಪರ್ಧೆಗಳಿದ್ದುವು. ಇವೆಲ್ಲದ್ದರಲ್ಲಿ ಅವಳು ಗೆದ್ದು ಪ್ರಶಸ್ತಿಗೆ ಪಾತ್ರಳಾಗಿದ್ದಾಳೆ. ದೇಶದ ಹೆಸರನ್ನು ಎತ್ತರಿಸುವುದು ನನ್ನ ಉದ್ದೇಶವೆಂದು ವೈಷ್ಣವಿ ಯರಾಗಡ ಹೇಳಿದ್ದಾರೆ.