ತಾಯಿಯನ್ನು ಅವಮಾನಿಸಿದ್ದು ಸಹಿಸದ 8 ವರ್ಷದ ಬಾಲಕ ಅಂಗಡಿಗೆ ಬೆಂಕಿ ಹಚ್ಚುತ್ತೇನೆ ಎಂದ!
Update: 2016-02-12 18:37 IST
ಕಾನ್‌ಪುರ: ಉತ್ತರ ಪ್ರದೇಶದ ಕಾನ್‌ಪುರ ಜಿಲ್ಲೆಯ ನೌಬಸ್ತಾದಲ್ಲಿ ಎಂಟುವರ್ಷದ ಬಾಲಕ ತನ್ನ ತಾಯಿಯನ್ನು ಇನ್ನೊಬ್ಬ ಮಹಿಳೆ ಅಪಮಾನಿಸಿದ್ದನ್ನು ನೋಡಿ ಕ್ರುದ್ಧಗೊಂಡು ಅಂಗಡಿಗೆ ಬೆಂಕಿ ಹಚ್ಚಲು ಹೊರಟ ಘಟನೆ ವರದಿಯಾಗಿದೆ. ಶುಭಮ್ ಎಂ ಬಾಲಕ ಆ ಮಹಿಳೆಯ ಅಂಗಡಿಗೆ ಸಾಮಾನು ಖರೀದಿಸಲು ಬಂದಿದ್ದ. ಆಗ ಅಂಗಡಿಯಲ್ಲಿದ್ದ ಮಹಿಳೆ ಶುಭಮ್‌ನನ್ನು ಬೈಯ್ಯತೊಡಗಿದ್ದಳು. ಅಲ್ಲಿಗೆ ಶುಭಮ್‌ನ ತಾಯಿ ಬಂದಾಗ ಅಂಗಡಿಯ ಮಹಿಳೆ ಅವಳನ್ನೂ ಬೈದು ದೂಡಿ ಹಾಕಲು ನೋಡಿದ್ದಳು. ಇದನ್ನು ನೋಡಿದ ಪುಟ್ಟ ಬಾಲಕ ಶುಭಮ್ ನನ್ನ ತಾಯಿಯನ್ನು ಬೈಯಲು ನಿನಗೆಷ್ಟು ಧೈರ್ಯ? ನೀನು ಹೇಗೆ ನನ್ನ ತಾಯಿ ಮೇಲೆ ಕೈಹಾಕಿದೆ ಎಂದು ಆ ಮಹಿಳೆಯನ್ನು ಕೇಳಿದ್ದಲ್ಲದೆ ನಿನ್ನ ಅಂಗಡಿಗೆ ಬೆಂಕಿ ಹಚ್ಚುತ್ತೇನೆಂದು ಹೇಳಿದ್ದಾನೆ. ಮಾತ್ರವಲ್ಲ ತನ್ನತಾಯಿಯನ್ನು ದೂಡಿಹಾಕಿದ್ದಕ್ಕಾಗಿ ಆಮಹಿಳೆಗೆ ಹೊಡೆಯಲು ಹೋದಾಗ ಅಲ್ಲಿದ್ದ ಕೆಲವರು ಬಾಲಕನನ್ನು ತಡೆದು ಸಮಾಧಾನ ಪಡಿಸಿರುವ ಘಟನೆ ವರದಿಯಾಗಿದೆ.