×
Ad

ಜ್ಞಾನಪೀಠ ಪುರಸ್ಕೃತ ಕವಿ ಕುರುಪ್ ನಿಧನ

Update: 2016-02-14 00:00 IST

ತಿರುವನಂತಪುರ, ಫೆ.13: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಖ್ಯಾತ ಮಲಯಾಳ ಕವಿ, ಭಾವಗೀತೆಗಾರ ಹಾಗೂ ಪರಿಸರವಾದಿ ಒ.ಎನ್ .ವಿ. ಕುರುಪ್ ಇಂದು ಹೃದಯ ಸ್ತಂಭನದಿಂದ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ.

ಅವರಿಗೆ 84 ವರ್ಷ ವಯಸ್ಸಾಗಿದ್ದು, ಪತ್ನಿ,ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಕೆಲ ದಿನಗಳಿಂದ ಅನಾರೋಗ್ಯಗೊಂಡಿದ್ದ ಕುರುಪ್‌ರನ್ನು ಎರಡು ದಿನಗಳ ಹಿಂದೆ ಇಲ್ಲಿನ ಆಸ್ಪತ್ರೆಯೊಂದಕ್ಕೆ ದಾಖಲಿಸಿ, ಜೀವ ರಕ್ಷಕ ವ್ಯವಸ್ಥೆ ಕಲ್ಪಿಸಲಾಗಿತ್ತು

ಅವರು ಇಂದು ಸಂಜೆ 4:49ರ ವೇಳೆ ಕೊನೆಯುಸಿರೆಳೆದರೆಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News