ಅತ್ಯಾಚಾರ: ಬಿಹಾರ ಶಾಸಕನ ಬಂಧನಕ್ಕೆ ಆದೇಶ

Update: 2016-02-13 18:35 GMT

ಪಾಟ್ನಾ,ಫೆ.13: ಅಪ್ರಾಪ್ತ ವಯಸ್ಕ ಬಾಲಕಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಜೆಡಿ ಶಾಸಕ ರಾಜ್ ವಲ್ಲಭ ಯಾದವ್ ವಿರುದ್ಧ ಶನಿವಾರ ಬಂಧನ ಆದೇಶವನ್ನು ಹೊರಡಿಸಲಾಗಿದೆ.

15ರ ಹರೆಯದ ಬಾಲಕಿಯು ಶನಿವಾರ ನಲಂದಾ ಜಿಲ್ಲಾ ಪೊಲೀಸರೆದುರು ತನ್ನ ಹೇಳಿಕೆಯನ್ನು ದಾಖಲಿಸಿದ್ದು,ತನಿಖೆಯು ಪ್ರಗತಿಯಲ್ಲಿದೆ ಎಂದು ಪಾಟ್ನಾ ವಲಯದ ಐಜಿಪಿ ಶಾಲಿನ್ ಕುಮಾರ್ ತಿಳಿಸಿದರು.

ಫೆ.6ರಂದು ಸುಲೇಖಾ ದೇವಿ ಎಂಬ ಮಹಿಳೆ ತನ್ನನ್ನು ಅಪಹರಿಸಿ ಶಾಸಕರ ನಿವಾಸಕ್ಕೆ ಒಯ್ದಿದ್ದಳು,ಬಳಿಕ ತನಗೆ ಬಲವಂತದಿಂದ ಮದ್ಯವನ್ನು ಕುಡಿಸಲಾಗಿತ್ತು. ಈ ವೇಳೆ ಶಾಸಕ ತನ್ನ ಮೇಲೆ ಅತ್ಯಾಚಾರವೆಸಗಿದ್ದು, ತನಗೆ 30,000 ರೂ.ನೀಡಿದ್ದ. ಸುಲೇಖಾ ದೇವಿ ಈ ಬಗ್ಗೆ ಯಾರಲ್ಲೂ ಬಾಯಿ ಬಿಡದಂತೆ ಎಚ್ಚರಿಕೆ ನೀಡಿದ್ದಳು ಎಂದು ಬಾಲಕಿ ಆಪಾದಿಸಿದ್ದಾಳೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News