ಜೇಟ್ಲೆ ವಿರುದ್ಧ ದೇಶದ್ರೋಹ ಆರೋಪ: ನ್ಯಾಯಾಧೀಶ ಅಮಾನತು

Update: 2016-02-14 03:39 GMT

ಅಲಹಾಬಾದ್, ಫೆ.14: ಕೇಂದ್ರ ಸರಕಾರದ ನ್ಯಾಯಾಂಗ ನೇಮಕಾತಿ ಆಯೋಗ ನೇಮಕ ನಿರ್ಧಾರವನ್ನು ತಳ್ಳಿಹಾಕಿದ್ದ ಸುಪ್ರೀಂಕೋರ್ಟ್ ತೀರ್ಪನ್ನು ಟೀಕಿಸಿದ ಕಾರಣಕ್ಕಾಗಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲೆಯವರ ವಿರುದ್ಧ ದೇಶದ್ರೋಹದ ಆರೋಪ ಮಾಡಿದ ರಝಾನ್ಸಿ ಜಿಲ್ಲೆಯ ಸಿವಿಲ್ ನ್ಯಾಯಾಧೀಶ ಅಂಕಿತ್ ಗೋಯಲ್ ಅವರನ್ನು ಅಮಾನತು ಮಾಡಿ ಅಲಹಾಬಾದ್ ಹೈಕೋರ್ಟ್ ಆದೇಶ ಹೊರಡಿಸಿದೆ.
ಅವ್ಯವಹಾರ ಹಾಗೂ ತಮ್ಮ ಕಾರ್ಯವ್ಯಾಪ್ತಿ ಉಲ್ಲಂಘಿಸಿದ ಕಾರಣಕ್ಕಾಗಿ ಹೈಕೋರ್ಟ್ ಈ ಕ್ರಮ ಕೈಗೊಂಡಿದೆ. ಜೇಟ್ಲೆಯವರ ಟೀಕೆಯ ವಿರುದ್ಧ ಸ್ವಯಂಪ್ರೇರಿತ ಕ್ರಮ ಕೈಗೊಂಡ ಅಂಕಿತ್ ಗೋಯಲ್, ನವೆಂಬರ್‌ನಲ್ಲಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಿದ್ದರು. ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಕೂಡಾ ತಿರುಚಬಹುದು ಎಂಬ ಹೇಳಿಕೆ ನೀಡಿದ್ದಕ್ಕಾಗಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ವಿರುದ್ಧವೂ ಇವರು ಸಮನ್ಸ್ ಜಾರಿಗೊಳಿಸಿದ್ದರು.
ಎರಡೂ ಪ್ರಕರಣಗಳಲ್ಲಿ ಹೈಕೋರ್ಟ್ ಮಧ್ಯಪ್ರವೇಶಿಸಿ ಗೋಯಲ್ ಅವರ ಆರೋಪಗಳನ್ನು ತಳ್ಳಿಹಾಕಿತ್ತು. ಗೋಯಲ್ ತಮ್ಮ ಆದೇಶದಲ್ಲಿ, ಹಣಕಾಸು ಸಿವರು ತಮ್ಮ ಬ್ಲಾಗ್‌ನಲ್ಲಿ, ಬಾರತದ ಪ್ರಜಾಪ್ರುತ್ವದ ಮೇಲೆ ಚುನಾಯಿತರಲ್ಲದವರು ದಬ್ಬಾಳಿಕೆ ಮಾಡಲಾಗದು ಎಂದು ಹೇಳಿದ್ದರು. ಇದು ಸಂವಿಧಾನದ 124 ಎ ವಿದಿ ಅನ್ವಯ ದೇಶದ್ರೋಹ ಹಾಗೂ ಐಪಿಸಿ 505ರ ಅನ್ವಯ ಸಾರ್ವಜನಿಕ ಕುಹಕ ಎಂದು ಅಭಿಪ್ರಾಯಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News