ಗೋಮಾಂಸ ಸೇವನೆಗಾಗಿ ಜನರ ಹತ್ಯೆ ಘೋರ ಅಪರಾಧ:ತಸ್ಲಿಮಾ

Update: 2016-02-14 14:25 GMT

ತಿರುವನಂತಪುರ,ಫೆ.14: ಗೋಮಾಂಸವನ್ನು ಸೇವಿಸಿದ್ದಾರೆಂಬ ಕಾರಣಕ್ಕಾಗಿ ಜನರನ್ನು ಕೊಲ್ಲುವುದು ಅಸಹಿಷ್ಣುತೆಯಲ್ಲ, ಅದು ಘೋರ ಅಪರಾಧವಾಗಿದೆ ಮತ್ತು ಅದನ್ನು ನಿಲ್ಲಿಸಬೇಕು ಎಂದು ಖ್ಯಾತ ಬಾಂಗ್ಲಾದೇಶಿ ಲೇಖಕಿ ತಸ್ಲಿಮಾ ನಸ್ರೀನ್ ಅವರು ಇಲ್ಲಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.


  ಇಲ್ಲಿ ಅಸಹಿಷ್ಣುತೆ ಏಕಾಏಕಿ ಆರಂಭಗೊಂಡಿದ್ದಲ್ಲ. ಭಾರತದ ಸಂವಿಧಾನ ಮತ್ತು ಕಾನೂನುಗಳು ಅಸಹಿಷ್ಣುತೆಯನ್ನು ಬೆಂಬಲಿಸುವುದಿಲ್ಲ,ಹೀಗಾಗಿ ಒಂದು ರಾಷ್ಟ್ರವಾಗಿ ಭಾರತವು ಅಸಹಿಷ್ಣುವಲ್ಲ. ಕಠಿಣ ಕಾನೂನುಗಳಿಂದಾಗಿ ಅಸಹಿಷ್ಣುತೆಗೆ ಆಸ್ಪದವಿಲ್ಲ. ಆದರೆ ಎಲ್ಲೆಡೆಯೂ ಅಸಹಿಷ್ಣುಗಳಾದ ಕೆಲವರು ಇರುತ್ತಾರೆ. ಇಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಬುದ್ಧಿಜೀವಿಗಳು ಅಸಹಿಷ್ಣುತೆಯನ್ನು ವಿರೋಧಿಸಿರುವುದು ಉತ್ತಮ ಲಕ್ಷಣವಾಗಿದೆ ಎಂದು ಕೊಝಿಕೊಡೆ ಸಾಹಿತ್ಯೋತ್ಸವದಲ್ಲಿ ಪಾಲ್ಗೊಳ್ಳಲು ಇತ್ತೀಚಿಗೆ ಕೇರಳದಲ್ಲಿದ್ದ ತಸ್ಲಿಮಾ ಮಲಯಾಳಂ ಟಿವಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.


ನರೇಂದ್ರ ಮೋದಿಯವರು ಪ್ರಧಾನಿಯಾಗಿರುವಾಗ ಭಾರತೀಯ ಪ್ರಜೆಯಾಗಲು ನೀವು ಬಯಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಭಾರತೀಯ ಸರಕಾರವು‘‘ಅಲಿಪ್ತ ಮತ್ತು ಜಾತ್ಯತೀತ’’ವೆಂದು ತಾನು ಭಾವಿಸಿದ್ದೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News