ಕೇಜ್ರಿವಾಲ್ ಸರಕಾರಕ್ಕೆ ತುಂಬಿತು ಒಂದು ವರ್ಷ
Update: 2016-02-14 20:28 IST
ಹೊಸದಿಲ್ಲಿ, ಫೆ.14: ದಿಲ್ಲಿಯ ಎಎಪಿ ಸರಕಾರವು ಒಂದು ವರ್ಷವನ್ನು ಪೂರೈಸಿದ ಸಂದರ್ಭದಲ್ಲಿಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಅವರ ಸಚಿವರು ಸಾರ್ವಜನಿಕರೊಂದಿಗೆ ಸಂವಹನ ಕಾರ್ಯಕ್ರಮವನ್ನು ನಡೆಸಿದ್ದಾರೆ. ಸಚಿವರು ಜನರ ದೂರವಾಣಿ ಕರೆಗಳಿಗೆ ಉತ್ತರಿಸಲಿದ್ದಾರೆ. ಹಾಗೂ ಜನರ ಅಭಿಪ್ರಾಯ ಆಲಿಸಿ, ಸರಕಾರದ ಸಾಧನಾ ವರದಿಯೊಂದನ್ನು ಜನರ ಮುಂದಿಡಲಿದ್ದಾರೆ. ತಾವಿಂದು ಅಧಿಕಾರದಲ್ಲಿ ಒಂದು ವರ್ಷ ಪೂರೈಸಿದ್ದೇವೆ. ಈಗ ಜನರ ಸೇವಕರು ವಿವರಣೆಯಗಳನ್ನು ನೀಡುವುದಕ್ಕಾಗಿ ತಮ್ಮ ಯಜಮಾನರ ಮುಂದೆ ನಿಂತಿದ್ದಾರೆಂದು ಕೇಜ್ರಿವಾಲ್ ಹೇಳಿದ್ದಾರೆ. ಈ 2 ತಾಸುಗಳ ಕಾರ್ಯಕ್ರಮವನ್ನು ಕನಾಟ್ ಪ್ಲೇಸ್‌ನ ಎನ್‌ಡಿಎಂಸಿ ಕನ್ವೆನ್ಶನ್ ಸೆಂಟರ್ ಸಂಘಟಿಸಿದೆ.