ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ಹೋರಾಡುತ್ತಿರುವ ಬಿಹಾರ ಸಹೋದರಿಯರು

Update: 2016-02-15 07:29 GMT

ಹೆಣ್ಣು ಮಗುವಿನ ಭ್ರೂಣ ಹತ್ಯೆ ತಡೆಯಲು ಬಿಹಾರದ ಸಹೋದರಿಯರಿಬ್ಬರು ಕಂಕಣಬದ್ಧರಾಗಿದ್ದಾರೆ. ತಮ್ಮ ಈ ಕಾರ್ಯಕ್ಕಾಗಿ ಅವರು ತಮ್ಮ ಸೈಕಲ್ಲಿನಲ್ಲಿ ಹಳ್ಳಿ ಹಳ್ಳಿಗಳನ್ನು ಸಂದರ್ಶಿಸಿ ಮಹಿಳೆಯರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ.

ಈ ಸಹೋದರಿಯರೇಮಿನಾಪುರದ ಮುಸ್ಲಿಂ ಬಾಹುಳ್ಯ ಹಳ್ಳಿಯಾಗಿರುವ ಖನೇಜದ್ಪುರದ ನಿವಾಸಿಗಳಾದ 21ರ ಹರೆಯದ ಶಾದಿಯಾ ಹಾಗೂ 18ರ ಹರೆಯದ ಆಕೆಯ ತಂಗಿ ಆಫ್ರೀನ್. ಶಾದಿಯಾಅರ್ಥಶಾಸ್ತ್ರದಲ್ಲಿ ಪದವೀಧರೆಯಾದರೆ, ಆಫ್ರೀನ್ 12ನೇ ತರಗತಿ ವಿದ್ಯಾರ್ಥಿನಿ. ತಮ್ಮ ಬಿಡುವಿನ ವೇಳೆಯಲ್ಲಿ ಈ ಸಹೋದರಿಯರು ಅಕ್ಕಪಕ್ಕದ ಹಳ್ಳಿಗಳಲ್ಲಿನ ಮನೆಗಳನ್ನು ಸಂದರ್ಶಿಸಿ ಅಲ್ಲಿನ ಮಹಿಳೆಯರಲ್ಲಿ ಭ್ರೂಣಹತ್ಯೆಯ ವಿರುದ್ಧಹಾಗೂ ಜನಸಂಖ್ಯಾ ನಿಯಂತ್ರಣದ ಬಗೆಗೆ ಅರಿವನ್ನುಂಟು ಮಾಡುತ್ತಾರೆ.

ಅವರ ಸೈಕಲ್ಲಿನಲ್ಲಿ ಭ್ರೂಣ ಹತ್ಯೆಯ ದುಷ್ಪರಿಣಾಮಗಳ ಮೇಲೆ ಬೆಳಕು ಚೆಲ್ಲುವ ಲೇಖನಗಳ ಪೇಪರ್ ಕಟ್ಟಿಂಗ್ಸ್ ಹಲವು ಇವೆ. ಅವುಗಳನ್ನು ಅವರು ಮಹಿಳೆಯರಿಗೆ ತೋರಿಸುತ್ತಾರೆ. ತಮ್ಮ ಕಾರ್ಯ ಸಾಧಿಸಲು ಅವರು ಅನೇಕ ಬಾರಿ ಕೆಲವೊಂದು ಗಂಭೀರ ಪ್ರಶ್ನೆಗಳನ್ನೆತ್ತುತ್ತಾರೆ- ‘‘ನಿಮ್ಮ ಮಗುವನ್ನು ಕಸದ ಡಬ್ಬಿಗೆಸೆದು ನಾಯಿ ಬೆಕ್ಕುಗಳಿಗೆ ಆಹಾರವಾಗಿಸುತ್ತೀರಾ?’’ಎಂದು ಕೇಳುತ್ತಾರೆ. ಇದಕ್ಕೆ ಮಹಿಳೆಯರು ಹೆದರಿ ‘‘ಇಲ್ಲ’’ವೆನ್ನುತ್ತಾರೆ. ಅಂತೆಯೇ ಜನಸಂಖ್ಯಾ ನಿಯಂತ್ರಣದ ಬಗ್ಗೆಯೂ ಅವರು ಮಾತನಡಿ ‘ಆರೇಳು ಮಕ್ಕಳನ್ನು ಹೆರುವುದಕ್ಕಿಂತ ಎರಡು ಮಕ್ಖಳನ್ನು ಹೆತ್ತು ಅವರನ್ನುಚೆನ್ನಾಗಿ ಲಾಲನೆ ಪಾಲನೆ ಮಾಡಿ ಅವರಿಗೆ ಉತ್ತಮ ಶಿಕ್ಷಣ ಒದಗಿಸಬಹುದಲ್ಲವೇ?’’ಎಂದು ಈ ಸಹೋದರಿಯರು ಮಹಿಳೆಯರನ್ನು ಪ್ರಶ್ನಿಸುತ್ತಾರೆ.

ಕೆಲವು ಹಳ್ಳಿಗಳ ಪುರುಷರು ಮೊದಮೊದಲು ಈ ಯುವತಿಯರನ್ನು ತಮ್ಮ ಮನೆಗೆ ಪ್ರವೇಶಿಸಿ ಮಹಿಳೆಯರೊಂದಿಗೆ ಮಾತನಾಡಲು ಅನುಮತಿಸಲು ನಿರಾಕರಿಸಿದರೂ, ಈಗ ಜನರಿಗೆ ನಿಧಾನವಾಗಿ ಈ ಯುವತಿಯರ ಕಾಂರ್ದ ಮಹತ್ವವು ಅರಿವಾಗುತ್ತಿದೆ.

ರೈತರೂ, ಪ್ರೊವಿಷನ್ ಸ್ಟೋರ್ ಒಂದರ ಮಾಲಕರೂ ಆಗಿರುವ ಈ ಯುವತಿಯರ ತಂದೆ ಮೊಹಮ್ಮದ್ ತಸ್ಲೀಂಗೆ ತಮ್ಮ ಪುತ್ರಿಯರ ಕಾರ್ಯದ ಬಗ್ಗೆ ಹೆಮ್ಮೆಯಿದೆ.

ಎನ್‌ಜಿಓ ಮಾನವ್ಡೆವಲೆಪ್‌ಮೆಂಟ್ ಫೌಂಡೇಶನ್ ಈ ಸಹೋದರಿಯರೊಂದಿಗೆ ಕೈಜೋಡಿಸಿದ್ದುಮುಸ್ಲಿಂ ಯುವತಿಯರಿಗಾಗಿ ಉಚಿತಟೈಲರಿಂಗ್ ಕ್ಲಾಸ್ ನಡೆಸುತ್ತಿದೆ. ಇದಕ್ಕಾಗಿ ಸಹೋದರಿಯರು ತಮ್ಮ ಮನೆಯ ಒಂದು ಭಾಗವನ್ನು ಬಿಟ್ಟು ಕೊಟ್ಟಿದ್ದಾರೆ.

ಈ ಯುವತಿಯರ ಸ್ತುತ್ಯರ್ಹ ಕಾರ್ಯ ಫಲ ನೀಡುತ್ತಿದೆ. ‘‘ಒಂದು ವರ್ಷದ ಹಿಂದೆ ನನ್ನ ಪುತ್ರಿಯರು ತಾಯಿಯೊಬ್ಬಳು ಹೆಣ್ಣು ಮಗುವಿನ ಭ್ರೂಣ ಹತ್ಯೆ ಮಾಡದಂತೆ ತಡೆಯುವಲ್ಲಿ ಸಫಲರಾಗಿ ಹೆಣ್ಣು ಮಕ್ಕಳ ಮಹತ್ವವನ್ನು ಆಕೆಗೆ ವಿವರಿಸಿದರು. ಆ ತಾಯಿ ತನ್ನ ಪುತ್ರಿಗೆ ಜನ್ನತ್ ಎಂಬ ಹೆಸರಿಟ್ಟಿದ್ದಾರೆ,’’ಎಂದು ತಸ್ಲೀಂ ತನ್ನ ಪುತ್ರಿಯರ ಬಗ್ಗೆ ಅಭಿಮಾನದಿಂದ ಹೇಳುತ್ತಾರೆ.–

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News