ಸಚಿವ ಆಝಂಖಾನ್‌ರಿಗೆ ಗುಲಾಬಿ ಹೂ ಕೊಟ್ಟು ಹ್ಯಾಪಿ ವ್ಯಾಲೆಂಟೈನ್ ಡೇ ಎಂದ ಮಹಿಳೆ!
Update: 2016-02-15 16:13 IST
ಲಕ್ನೋ: ಉತ್ತರ ಪ್ರದೇಶದ ಕ್ಯಾಬಿನೆಟ್ ಸಚಿವ ಆಝಂಖಾನ್‌ಗೆ ವ್ಯಾಲೆಂಟೈನ್ ಡೇ ಸಂದರ್ಭದಲ್ಲಿ ಮಹಿಳೆಯೊಬ್ಬಳು ಗುಲಾಬಿ ನೀಡಿ ಹ್ಯಾಪಿ ವ್ಯಾಲೆಂಟೈನ್ ಡೇ ಎಂದಾಗ ಅವರು ಗಾಬರಿಗೊಂಡರು. ನಂತರ ಚೇತರಿಸಿ ಒಂದು ವೇಳೆ ಆರೆಸ್ಸೆಸ್ ಮಂದಿ ನೋಡಿದರೆ ಫಜೀತಿ ಎಂದು ಹಾಸ್ಯವಾಗಿ ಪ್ರತಿಕ್ರಿಯಿಸಿದ್ದಾರೆ.
ಮೀರತ್‌ನಲ್ಲಿ ಸಚಿವ ಶಾಹಿದ್ ಮಂಝೂರ್ ರ ಮನೆಯ ವಿವಾಹಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆಝಂ ಖಾನ್ ಪತ್ರಕರ್ತರೊಂದಿಗೆ ಮಾತಾಡಲು ನಿರಾಕರಿಸಿದ ಅವರು ಇದೊಂದು ಖಾಸಗಿ ಕಾರ್ಯಕ್ರಮ ಎಂದು ಹೇಳುತ್ತಿದ್ದಾಗ ಮುಝಪ್ಫರ್‌ನಗರ್‌ನ ಮಹಿಳೆಯೊಬ್ಬರು ಗುಲಾಬಿ ಹೂ ನೀಡಿ ಹ್ಯಾಪಿ ವ್ಯಾಲೆಂಟೈನ್ ಡೇ ಎಂದಿದ್ದಾರೆ. ಆರೆಸ್ಸೆಸ್‌ನವರು ನೋಡಿದರೆ ಫಜೀತಿ ಎಂದು ಮಹಿಳೆಗೆ ಪ್ರತಿಕ್ರಿಯಿಸಿದಾಗ ಸಚಿವ ಶಾಹಿದ್ ಮಂಝೂರ್ ಸಹಿತ ಪಕ್ಷದ ಇತರ ನಾಯಕರು ನಕ್ಕಿದ್ದಾರೆ. ಆನಂತರ ಹೂವನ್ನು ತನ್ನ ಜೊತೆ ಇದ್ದವರಿಗೆ ನೀಡಿ ಮದುವೆ ಔತಣಸವಿಯಲು ಆಝಂಖಾನ್ ಹೊರಟು ಹೋದರು.