ಏಳು ರಾಜ್ಯಗಳಿಗೆ ಒಟ್ಟೂ 4,100 ಕೋ.ರೂ. ಪ್ರಕೃತಿ ವಿಕೋಪ ಪರಿಹಾರ ಮಂಜೂರು
Update: 2016-02-15 18:25 IST
ಹೊಸದಿಲ್ಲ,ಫೆ.15: ಚುನಾವಣೆಗಳು ಸನ್ನಿಹಿತವಾಗಿರುವ ತಮಿಳುನಾಡು ಮತ್ತು ಅಸ್ಸಾಂ ಸೇರಿದಂತೆ ಏಳು ರಾಜ್ಯಗಳಿಗೆ ಪ್ರಕೃತಿ ವಿಕೋಪ ಪರಿಹಾರವಾಗಿ ಸುಮಾರು 4,100 ಕೋ.ರೂ.ಗಳನ್ನು ಸರಕಾರವು ಸೋಮವಾರ ಮಂಜೂರು ಮಾಡಿದೆ.
ನೆರೆ ಮತ್ತು ಬರಪೀಡಿತ ರಾಜ್ಯಗಳಿಗೆ 4,087.27 ಕೋ.ರೂ.ಕೇಂದ್ರ ನೆರವಿನ ಪ್ರಸ್ತಾವನೆಗೆ ಗೃಹಸಚಿವ ರಾಜನಾಥ ಸಿಂಗ್ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಒಪ್ಪಿಗೆಯನ್ನು ನೀಡಿತು.
ಆಂಧ್ರ ಪ್ರದೇಶಕ್ಕೆ 280.19 ಕೋಟಿ,ಅಸ್ಸಾಮಿಗೆ 332.57 ಕೋಟಿ,ಹಿಮಾಚಲ ಪ್ರದೇಶಕ್ಕೆ 170.19 ಕೋಟಿ,ನಾಗಾಲ್ಯಾಂಡ್‌ಗೆ 16.02 ಕೋಟಿ,ಜಾರ್ಖಂಡ್‌ಗೆ 336.94 ಕೋಟಿ,ರಾಜಸ್ಥಾನಕ್ಕೆ 1177.59 ಕೋಟಿ ಮತ್ತು ತಮಿಳುನಾಡಿಗೆ 1773.78 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ.