×
Ad

ಸರ್ದಾರ್‌ಜಿ ಜೋಕ್‌ಗಳ ನಿಯಂತ್ರಣ ಪರಿಶೀಲನೆಗೆ ಸುಪ್ರೀಂ ಕೋರ್ಟ್ ಅಸ್ತು

Update: 2016-02-16 22:24 IST

ಹೊಸದಿಲ್ಲಿ, ಫೆ.16: ಅಂತರ್ಜಾಲದಲ್ಲಿ ಜನಾಂಗೀಯವಾದಿ ಅಥವಾ ಕೋಮುವಾದಿ ನಗೆ ಹನಿಗಳ ಆವರ್ತನವನ್ನು ನಿಲ್ಲಿಸಲು ಮಾರ್ಗಸೂತ್ರಗಳ ಕುರಿತು ಪರಿಶೀಲಿಸುವೆನೆಂದು ಸಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.

ಸರ್ದಾರ್‌ಗಳ ಕುರಿತು ನಗೆ ಹನಿಗಳನ್ನು ತಡೆಯುವಂತೆ ಕೋರಿದ್ದ ಅರ್ಜಿಗಳ ವಿಚಾರಣೆಯ ವೇಳೆ ಅದು ಈ ವಿಷಯ ತಿಳಿಸಿದೆ.
ಯಾವುದೇ ಸಮುದಾಯ ಅಥವಾ ಸಾಮಾಜಿಕ ಗುಂಪನ್ನು ಅಪಹಾಸ್ಯ ಮಾಡುವ ನಗೆ ಹನಿಗಳನ್ನು ಆವರ್ತಿಸದಂತೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು. ಪಂಜಾಬ್, ಬಿಹಾರ ಹಾಗೂ ಈಶಾನ್ಯ ರಾಜ್ಯಗಳ ಜನರನ್ನು ಅಪಹಾಸ್ಯ ಮಾಡುವ ನಗೆ ಹನಿಗಳನ್ನು ತಾನು ವಿರೋಧಿಸುತ್ತೇನೆಂದು ದಿಲ್ಲಿ ಸಿಖ್ ಗುರುದ್ವಾರ ಪ್ರಬಂಧನ ಸಮಿತಿ ಹೇಳಿದೆ.
ಅದು ವಾರಗಳೊಳಗೆ ಸಾಧ್ಯವಿರುವ ಮಾರ್ಗಸೂತ್ರಗಳ ಬಗ್ಗೆ ಸಲಹೆ ನೀಡುವಂತೆ ಅರ್ಜಿದಾರ ಹರ್ವಿಂದರ್ ಚೌಧರಿ ಹಾಗೂ ಗುರುದ್ವಾರ ಪ್ರಬಂಧನ ಸಮಿತಿಯ ಪರ ಹಿರಿಯ ವಕೀಲ ಆರ್.ಎಸ್.ಸೂರಿಯವರಿಗೆ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ನೇತೃತ್ವದ ಪೀಠ ಸೂಚಿಸಿದೆ.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News