×
Ad

ನಿಮ್ಮ ಪ್ರತಿಜ್ಞೆಯನ್ನು ನೆನಪಿಡಿ : ವಂದೇ ಮಾತರಂ ಘೋಷಣೆ ಕೂಗಿದ ವಕೀಲನಿಗೆ ಸುಪ್ರೀಂ ಎಚ್ಚರಿಕೆ

Update: 2016-02-17 13:40 IST

ಹೊಸದಿಲ್ಲಿ , ಫೆ. 17: ಸೋಮವಾರ ದಿಲ್ಲಿ ನ್ಯಾಯಾಲಯದಲ್ಲಿ ನಡೆದ ಹಿಂಸಾಚಾರ ಕುರಿತು ಇಂದು ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿರುವಾಗ ವಂದೇ ಮಾತರಂ ಘೋಷಣೆ ಕೂಗಿ ಕಲಾಪಕ್ಕೆ ಅಡ್ಡಿಪಡಿಸಿದ ವಕೀಲ್ ರಾಜೀವ್ ಯಾದವ್ ಗೆ ಎಚ್ಚರಿಕೆ ನೀಡಿರುವ ನ್ಯಾಯಾಧೀಶರು " ವಕೀಲರಾಗಿ ನೀವು ತೆಗೆದುಕೊಂಡ ಪ್ರತಿಜ್ಞೆಯನ್ನು ನೆನಪಿಡಿ " ಎಂದು ಹೇಳಿದರು. 

" ಸುಪ್ರೀಂ ಕೋರ್ಟ್ ನಲ್ಲೇ ಹೀಗಾದರೆ ನಾವು ಏನು ಹೇಳುವುದು ? ನೀವು ವಕೀಲರಾಗಿ ಹೀಗೆ ಮಾಡುವುದೇ ? ಜನರು ಈ ಸಂಸ್ಥೆಯ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ " ಎಂದು ನ್ಯಾಯಮೂರ್ತಿಗಳಾದ ಚಲಮೆಶ್ವರ್ ಹಾಗು ಅಭಯ್ ಸಪ್ರೆ ಅವರು ಹೇಳಿದರು. 

ಬಳಿಕ ವಕೀಲ ಕ್ಷಮೆ ಯಾಚಿಸಿದರು . 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News