×
Ad

ಮೊಟ್ಟೆ ತಿನ್ನಿ ಏನೂ ಆಗಲ್ಲ: FSSAI ಸ್ಪಷ್ಟನೆ

"ಕ್ಯಾನ್ಸರ್ ಅಪಾಯ ಬರೀ ಸುಳ್ಳು"

Update: 2025-12-20 21:20 IST

ಸಾಂದರ್ಭಿಕ ಚಿತ್ರ | Photo Credit : freepik

ಹೊಸದಿಲ್ಲಿ,ಡಿ.20: ಮೊಟ್ಟೆ ಸೇವನೆಯಿಂದ ಕ್ಯಾನ್ಸರ್‌ ಗೆ ತುತ್ತಾಗುವ ಅಪಾಯವಿದೆಯೆಂಬ ಇತ್ತೀಚಿನ ಪ್ರತಿಪಾದನೆಗಳನ್ನು ಭಾರತೀಯ ಆಹಾರ ಸುರಕ್ಷತೆ ಹಾಗೂ ಮಾನದಂಡಗಳ ಪ್ರಾಧಿಕಾರ (FSSAI) ಶನಿವಾರ ಸ್ಪಷ್ಟವಾಗಿ ತಳ್ಳಿಹಾಕಿದೆ.

‘‘ಇಂತಹ ಆಧಾರರಹಿತವಾದ ಹಾಗೂ ದಾರಿತಪ್ಪಿಸುವ ವಾದಗಳು ಸಾರ್ವಜನಿಕರಲ್ಲಿ ಅನಗತ್ಯವಾಗಿ ಗಾಬರಿಯನ್ನು ಸೃಷ್ಟಿಸುತ್ತದೆ’’ಎಂದು ಅದು ಬಣ್ಣಿಸಿದೆ.

ಈ ಬಗ್ಗೆ ಶನಿವಾರ ಹೇಳಿಕೆಯೊಂದನ್ನು ಪ್ರಕಟಿಸಿರುವ FSSAI, ದೇಶದಲ್ಲಿ ಲಭ್ಯವಿರುವ ಮೊಟ್ಟೆಗಳು ಮಾನವ ಬಳಕೆಗೆ ಸುರಕ್ಷಿತವಾಗಿದೆ ಮತ್ತು ಮೊಟ್ಟೆಯಲ್ಲಿ ಕ್ಯಾನ್ಸರ್‌ ಕಾರಕವಾದ ಅಂಶಗಳು ಪತ್ತೆಯಾಗಿವೆಯೆಂದು ಆರೋಪಿಸುವ ವರದಿಗಳಿಗೆ ವೈಜ್ಞಾನಿಕ ಆಧಾರಗಳಿಲ್ಲವೆಂದು ಸ್ಪಷ್ಟಪಡಿಸಿದೆ.

ಕೋಳಿಸಾಕಣೆ ಹಾಗೂ ಮೊಟ್ಟೆ ಉತ್ಪಾದನೆಯ ಎಲ್ಲಾ ಹಂತಗಳಲ್ಲಿಯೂ ಆರೋಗ್ಯಕ್ಕೆ ಅಪಾಯಕಾರಿಯಾದ ನೈಟ್ರೊಫ್ಯೂರಾನ್‌ ಗಳ ಬಳಕೆಯನ್ನು ಆಹಾರ ಸುರಕ್ಷತೆ ಹಾಗೂ ಮಾನದಂಡಗಳ (ಮಾಲಿನ್ಯ, ವಿಷಕಾರಿ ಪದಾರ್ಥಗಳು ಹಾಗೂ ಅವಶೇಷಗಳು) ಕಾನೂನುಗಳು, 2011ರಡಿ ನಿಷೇಧಿಸಲಾಗಿದೆಯೆಂದು FSSAI ತಿಳಿಸಿದೆ.

ಮೊಟ್ಟೆಗಳು ಅಸುರಕ್ಷಿತವೆಂಬ ಹಣೆಪಟ್ಟಿ ಹಚ್ಚಲು ಒಂದೆರಡು ಪ್ರಾಯೋಗಿಕ ಸಂಶೋಧನೆಗಳನ್ನು ಸಾರ್ವತ್ರೀಕರಣಗೊಳಿಸುವುದು ವೈಜ್ಞಾನಿಕವಾಗಿ ಸರಿಯಲ್ಲವೆಂದು ಹೇಳಿಕೆ ತಿಳಿಸಿದೆ. ಮೊಟ್ಟೆಯ ಬಳಕೆದಾರರು ದೃಢೀಕೃತವಾದ ವೈಜ್ಞಾನಿಕ ಪುರಾವೆಗಳನ್ನು ಮಾತ್ರವೇ ಅವಲಂಭಿಸಬೇಕೆಂದು ಹೇಳಿದ FSSAI, ಆಹಾರ ಸುರಕ್ಷತಾ ನಿಯಮಾವಳಿಗಳಿಗೆ ಅನುಗುಣವಾಗಿ ಉತ್ಪಾದನೆಗೊಂಡ ಮೊಟ್ಟೆಗಳ ಸೇನೆ ಸಂಪೂರ್ಣ ಸುರಕ್ಷಿತ ಹಾಗೂ ಪೌಷ್ಟಿಕವಾದುದಾಗಿವೆ ಎಂದು ಪುನರುಚ್ಚರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News