ಬರಮುಕ್ತ ಮಹಾರಾಷ್ಟ್ರ ಯೋಜನೆಗೆ ಆಮಿರ‍್ ಖಾನ್ ರಾಯಭಾರಿ ನೇಮಕ ಪ್ರಸ್ತಾಪವನ್ನು ತಳ್ಳಿ ಹಾಕಿದ ಫಡ್ನಾವಿಸ್
Update: 2016-02-17 14:18 IST
ಮುಂಬೈ, ಫೆ.17: ಮಹಾರಾಷ್ಟ್ರವನ್ನು ಬರ ಮುಕ್ತ ರಾಜ್ಯವನ್ನಾಗಿಸುವ ಜಲ ಯುಕ್ತ್ ಶಿವಾರ್ ಯೋಜನೆಗೆ ಬಾಲಿವುಡ್ ನಟ ಆಮಿರ್ ಖಾನ್‌ರನ್ನು ರಾಯಭಾರಿಯಾಗಿ ನೇಮಕ ಮಾಡುವ ಪ್ರಸ್ತಾಪವನ್ನು ಮುಖ್ಯಮಂತ್ರಿ ದೇವೆಂದ್ರ ಫಡ್ನಾವೀಸ್ ತಳ್ಳಿ ಹಾಕಿದ್ದಾರೆ.
ಅಸಹಿಷ್ಣುತೆಯ ವಿವಾದದಲ್ಲಿ ಇನ್‌ಕ್ರೇಡಿಬಲ್ ಇಂಡಿಯಾ ರಾಯಭಾರಿ ಹುದ್ದೆ ಕಳೆದುಕೊಂಡಿದ್ದ ಬಾಲಿವುಡ್ ಸ್ಟಾರ‍್ ಆಮಿರ‍್ ಖಾನ್ ಅವರನ್ನು ಇದೀಗ ಮಹಾರಾಷ್ಟ್ರ ಸರಕಾರ ಬರಮುಕ್ತ ಮಹಾರಾಷ್ಟ್ರ ಯೋಜನೆಗೆ ರಾಯಭಾರಿಯನ್ನಾಗಿ ನೇಮಕ ಮಾಡಿದ್ದು, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೆಂದ್ರ ಫಡ್ನಾವೀಸ್ ಇಂದು ನಡೆಯಲಿರುವ ಸಮಾರಂಭದಲ್ಲಿ ಆಮಿರ‍್ ಖಾನ್ ಅವರನ್ನು ಅಧಿಕೃತವಾಗಿ ರಾಯಭಾರಿಯಾಗಿ ಘೋಷಣೆ ಮಾಡಲಿದ್ದಾರೆ ಎಂದು ವರದಿ ತಿಳಿಸಿತ್ತು.
ಎಬಿಪಿ ನ್ಯೂಸ್‌ಗೆ ನೀಡಿರುವ ಸಂದರ್ಶನಲ್ಲಿ ನಟ ಆಮಿರ್ ಖಾನ್‌ರನ್ನು ರಾಯಭಾರಿಯಾಗಿ ನೇಮಕ ಮಾಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.