×
Ad

ಪಟಿಯಾಲ ನ್ಯಾಯಾಲಯದಲ್ಲಿ ಮತ್ತೆ ಪತ್ರಕರ್ತರ ಮೇಲೆ ಹಲ್ಲೆ

Update: 2016-02-17 15:05 IST

ಹೊಸದಿಲ್ಲಿ, ಫೆ.17: ಜವಾಹರ‍್ಲಾಲ್ ನೆಹರೂ ವಿವಿ ವಿದ್ಯಾರ್ಥಿ ಸಂಘದ  ನಾಯಕ ಕನ್ಹೈಯಾ ಕುಮಾರ‍್  ವಿಚಾರಣೆ ನಡೆಯುವುದನ್ನು ವರದಿ ಮಾಡಲು ತೆರಳಿದ್ದ ಪತ್ರಕರ್ತರ ಮೇಲೆ ಪಟಿಯಾಲ ನ್ಯಾಯಾಲಯದ ಆವರಣದಲ್  ಇಂದು ಹಲ್ಲೆ ನಡೆದಿದೆ.
ವಿಕ್ರಮ್ ಚೌಹಾನ್‌ ನೇತೃತ್ವದ ವಕೀಲರ ತಂಡ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದೆ ಎನ್ನಲಾಗಿದೆ. ವಿಕ್ರಮ್‌ ಚೌಹಾನ್‌ ಸೋಮವಾರ ಜೆಎನ್‌ ವಿವಿ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಆರೋಪಿ ಎಂದು ಹೇಳಲಾಗಿದೆ.
 ವಿದ್ಯಾರ್ಥಿ ಸಂಘದ  ನಾಯಕ ಕನ್ಹೈಯಾ ಕುಮಾರ‍್  ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಂದರ್ಭದಲ್ಲಿ ಯಾರಿಗೆಲ್ಲ ಅವಕಾಶ ನೀಡಬೇಕೆಂದು ಸುಪ್ರೀಮ್ ಕೋರ್ಟ್‌ ಸ್ಪಷ್ಟವಾಗಿ ನಿರ್ದೇಶನ ನೀಡಿದ್ದರೂ, ವಕೀಲರ ತಂಡವೊಂದು ನ್ಯಾಯಾಲಯದ ಆದೇಶವನ್ನು ಗಾಳಿಗೆ ತೂರಿ, ತ್ರಿವರ್ಣ ಧ್ವಜದೊಂದಿಗೆ ದೇಶದ ಪರ ಘೋಷಣೆ ಕೂಗುತ್ತಾ ಆಗಮಿಸಿ, ಪರ್ತಕರ್ತರ ಮೇಲೆ ನಡೆಸಿತೆಂದು  ತಿಳಿದು ಬಂದಿದೆ.
ನ್ಯಾಯಮೂರ್ತಿ ಜೆ.ಚೆಲ್ಮೇಶ್ವರ ಮತ್ತು ನ್ಯಾಯಮೂರ್ತಿ ಸಪ್ರೆ ಅವರನ್ನೊಳಗೊಂಡ ಪೀಠ ಆರೋಪಿ ಕನ್ಹೈಯಾ ಕುಮಾರ‍್  ವಿಚಾರಣೆಯ ವೇಳೆ ಅವರ ಕುಟುಂಬದ ಇಬ್ಬರು ಸದಸ್ಯರು, ಓರ್ವ ಶಿಕ್ಷಕ, ಓರ್ವ ವಿದ್ಯಾರ್ಥಿ ಪ್ರತಿನಿಧಿ ಹಾಗೂ ಐವರು ಪತ್ರಕರ್ತರಿಗೆ ಮಾತ್ರ ಅವಕಾಶ ಆದೇಶ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News