×
Ad

ಕೇರಳದ ಸಾಹಿತಿ ಅಕ್ಬರ್ ಕಕ್ಕಾಟಿಲ್ ನಿಧನ

Update: 2016-02-17 15:22 IST

ಕೋಝಿಕ್ಕೋಡ್: ಮಳೆಯಾಳಂ ಸಾಹಿತಿ, ಪ್ರಮುಖ ಬರಹಗಾರ ಅಕ್ಬರ್ ಕಕ್ಕಾಟಿಲ್ ಇಂದು ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ. ಸ್ವಯಂ ಅಧ್ಯಾಪಕರಾಗಿ ನಿವೃತ್ತರಾಗಿದ್ದ ಅವರು ಅಧ್ಯಾಪಕರ ಜೀವನದ ಕುರಿತು ಬರೆದ ಬರಹಗಳು ಅವರನ್ನು ಜನಪ್ರಿಯಗೊಳಿಸಿತ್ತು.

ನಿಧನರಾಗುವ ವೇಳೆಗೆ ಅರವತ್ತೆರಡು ವರ್ಷವಯಸ್ಸಾಗಿತ್ತು. ಈ ತಿಂಗಳ ಆರಂಭದಲ್ಲಿ ಪ್ರಸಿದ್ಧ ಸಾಹಿತಿ ಓಎನ್ ವಿ ಕುರುಪ್ ನಿಧನರಾಗಿದ್ದರು.

ಅಕ್ಬರ್‌ರಿಗೆ ಎರಡು ಬಾರಿ ಕೇರಳ ಸಾಹಿತ್ಯ ಅಕಾಡಮಿ ಪ್ರಶಸ್ತಿ ಲಭಿಸಿದೆ. ಶಮೀಲಾ, ಆಧ್ಯಾಪಕರ ಕತೆಗಳು, ಆರಾಂಕಾಲಂ, ನಾದಾಪುರಂ, ಮೈಲಾಂಜಿಕಾಟ್ ಮುಂತಾದ ಅನೇಕ ಕಥಾ ಸಂಕಲನಗಳನ್ನು ಅವರು ಬಿಡುಗಡೆಗೊಳಿಸಿದ್ದಾರೆ. ಒಟ್ಟುನಾಲ್ಕು ಕಾದಂಬರಿ, 27 ಸಣ್ಣಕತೆ ಸಂಕಲನ ಒಟ್ಟು 54 ಗ್ರಂಥಗಳು ಹೊರಬಂದಿವೆ ಆರಾಂಕಾಲಂ ಎಂಬುದು ಕ್ಯಾಲಿಕಟ್ ಯೂನಿವರ್ಸಿಟಿ ಮತ್ತು ಮೈಸೂರು ಯೂನಿವರ್ಸಿಟಿ ಪದವಿಗೆ ಪಾಠಪುಸ್ತಕವಾಗಿದೆ. ಅವರ ಕೆಲವು ರಚನೆಗಳು ಕೇರಳದಲ್ಲಿ ಪಾಠಪುಸ್ತಕಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News