×
Ad

ರೈಲಲ್ಲಿ ಕದ್ದರೆ ಏನಾಗುತ್ತದೆ ಎಂದು ನೋಡಿ ಪೆಟ್ಟು ತಿಂದ ಭೂಫ!

Update: 2016-02-17 15:27 IST

ಲಂಡನ್: ರೈಲಲ್ಲಿ ಪ್ರಯಾಣಿಸುವ ವ್ಯಕ್ತಿಯಿಂದ ಬ್ಯಾಗ್ ಕದ್ದರೆ ಸಹಪ್ರಯಾಣಿಕರು ಹೇಗೆ ಪ್ರತಿಕ್ರಿಯಿಸಬಹುದು..? ಇದನ್ನು ಪರೀಕ್ಷಿಸಿ ನೋಡಲಿಕ್ಕಾಗಿ ಹೊರಟು ಪೆಟ್ಟು ತಿಂದ ವ್ಯಕ್ತಿ ಲಂಡನ್‌ನ ಜೂಲಿಯಸ್ ಡೇಯ್ನಿ. ಇದಕ್ಕೆ ಸಂಬಂಧಿಸಿದ ವೀಡಿಯೊವನ್ನು ಆತ ಯೂಟ್ಯೂಬ್‌ಗೆ ಹಾಕಿದ್ದಾನೆ.

ಒಂದು ಅಪರಾಧವನ್ನು ಕಣ್ಣಾರೆ ಕಂಡಾಗ ಪ್ರಜ್ಞಾವಂತ ಪ್ರಜೆಗಳ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ತಿಳಿದುಕೊಳ್ಳಲಿಕ್ಕಾಗಿ ಆತ ಈ ಪ್ರಯೋಗಕ್ಕಿಳಿದಿದ್ದ. ಜೊತೆಗೆ ಸಾಕಷ್ಟು ಪೆಟ್ಟೂ ತಿಂದಿದ್ದ. ಆದರೆ ನಾವು ಮಾದರಿ ಪ್ರಜೆಗಳೆಂಬುದನ್ನು ಹೆಚ್ಚಿನ ನಾಗರಿಕರು ಪೆಟ್ಟು ಕೊಡುವ ಮೂಲಕ ಅವನಿಗೆ ತೋರಿಸಿಕೊಟ್ಟಿದ್ದರು.

ಜೂಲಿಯಸ್ ಕದಿಯುವುದನ್ನು ಕಂಡ ಮಹಿಳೆಯೊಬ್ಬರು ಅವನನ್ನು ಹೊಡೆದರು. ಇನ್ನೊಬ್ಬ ಪ್ರಯಾಣಿಕ ಕತ್ತು ಹಿಡಿದಿದ್ದಾನೆ. ಇದಕ್ಕೆ ಸಂಬಂಧಿಸಿದ ವೀಡಿಯೋ ಕಳೆದ ವಾರ ಫೇಸ್ ಬುಕ್‌ಗೆ ಹಾಕಿದ ಬಳಿಕ ಏಳು ಲಕ್ಷ ಮಂದಿ ಅದನ್ನು ನೋಡಿದ್ದಾರೆ. ಇದಕ್ಕೆ ಸಂಬಂಧಿಸಿದ ಐದು ವೀಡಿಯೊ ಕ್ಲಿಪ್ಪಿಂಗ್‌ಗಳನ್ನು ಜೂಲಿಯಸ್ ಹಾಕಿದ್ದಾನೆ. ಅದರಲ್ಲಿ ಆತ ಬ್ಯಾಗ್ ಕದಿಯುವುದು, ವಸ್ತು ಕದಿಯುವುದು ಜನರು ಅವನಿಗೆ ಹೊಡೆಯುವುದು ಮುಂತಾದುವುಗಳಿವೆ.

ಕೊನೆಯ ವೀಡಿಯೊದಲ್ಲಿ ಅವನನ್ನು ತಡೆದಿರಿಸುವುದು ಕಾಣಿಸುತ್ತಿದೆ. ಅನಂತರ ಆತ ಸೀಟ್‌ನಲ್ಲ ಕುಳಿತುಕೊಳ್ಳುತ್ತಾನೆ. ತನ್ನ ಬ್ಯಾಗ್‌ನಿಂದ ಲ್ಯಾಪ್‌ಟ್ಯಾಪ್ ಹೊರತೆಗೆಯುವುದು ಕಾಣಿಸುತ್ತಿದೆ. ಒಬ್ಬ ಪ್ರಯಾಣಿಕ ಈ ಲಾಪ್‌ಟ್ಯಾಪ್ ನಿನ್ನದೇನು? ಎಂದು ಕೇಳುತ್ತಿರುವುದು ಕಾಣಿಸುತ್ತಿದೆ. ಹೀಗೆ ನಾನಾ ರೀತಿಯ ಕಳ್ಳತನ ಪ್ರಯೋಗಕ್ಕಿಳಿದುದರ ಚಿತ್ರಗಳು ಇವೆ. ಇದಕ್ಕಾಗಿ ಜೂಲಿಯಸ್ ಹಲವು ರೀತಿಯ ಹಿಂಸೆಯನ್ನು ಸಹಿಸಿಕೊಂಡಿದ್ದಾನೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News