ಕನ್ಹಯ್ಯ ಕುಮಾರ್ ಮೇಲೆ ದಿಲ್ಲಿ ನ್ಯಾಯಾಲಯದಲ್ಲಿ ವಕೀಲರಿಂದ ಹಲ್ಲೆ
Update: 2016-02-17 15:30 IST
ಹೊಸದಿಲ್ಲಿ , ಫ಼ೆ. 17 : ಇಲ್ಲಿನ ನ್ಯಾಯಾಲಯಕ್ಕೆ ಇಂದು ಹಾಜರಾದ ಜೆಎನ್ ಯು ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್ ಮೇಲೆ ವಕೀಲರ ಗುಂಪೊಂದು ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಕೇವಲ ಎರಡು ದಿನ ಹಿಂದೆ ಇದೇ ರೀತಿ ಕನ್ಹಯ್ಯ ಹಾಜರಾಗುವಾಗ ವಿದ್ಯಾರ್ಥಿಗಳು ಹಾಗು ಪತ್ರಕರ್ತರ ಮೇಲೆ ಇಲ್ಲಿನ ವಕೀಲರ ತಂಡ ಹಲ್ಲೆ ನಡೆಸಿತ್ತು. ಅಂದು ಮೂಕಪ್ರೇಕ್ಷಕರಾಗಿದ್ದ ಪೊಲೀಸರು ಇಂದು ಮತ್ತೆ ಹಿಂಸೆ ತಡೆಯುವಲ್ಲಿ ವಿಫ಼ಲರಾಗಿದ್ದಾರೆ. ಈ ಸಂದರ್ಭದಲ್ಲಿ ಹಲ್ಲೆಕೊರರು ಭಾರತ್ ಮಾತಾಕಿ ಜೈ ಎಂದು ಘೋಷಣೆ ಕೂಗುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಕೂಗುತ್ತಿದ್ದರು.
ಸುಪ್ರೀಂ ಕೋರ್ಟ್ ಇಂದಿನ ವಿಚಾರಣೆ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಿದ ಹೊರತಾಗಿಯೂ ಹಿಂಸೆ ಹಾಗು ಗೊಂದಲ ಇಂದೂ ಮುಂದುವರಿದಿರುವುದು ಆಶ್ಚರ್ಯ ತಂದಿದೆ.