ಕನ್ಹಯ್ಯ ವಿರುದ್ಧ ಸಾಕಷ್ಟು ಸಾಕ್ಷವಿದೆ:ದಿಲ್ಲಿ ಪೊಲೀಸ್
Update: 2016-02-17 20:29 IST
ಹೊಸದಿಲ್ಲಿ,ಫೆ.17: ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ ಮೇಲೆ ದೇಶದ್ರೋಹದ ಆರೋಪವನ್ನು ಹೊರಿಸಿರುವುದಕ್ಕಾಗಿ ತೀವ್ರ ಟೀಕೆಗಳಿಗೆ ಗುರಿಯಾಗಿರುವ ದಿಲ್ಲಿ ಪೊಲೀಸ್ ಆಯುಕ್ತ ಬಿ.ಎಸ್.ಬಸ್ಸಿ ಅವರು, ಆತನ ವಿರುದ್ಧ ಸಾಕಷ್ಟು ಸಾಕ್ಷಾಧಾರಗಳಿವೆ ಎಂದು ಬುಧವಾರ ಇಲ್ಲಿ ಪುನರುಚ್ಚರಿಸಿದರು.
ಪ್ರಧಾನಿ ಕಚೇರಿಯಿಂದ ಹೊರಬರುತ್ತಿದ್ದ ಬಸ್ಸಿ,ವಿವಾದದ ಕೇಂದ್ರಬಿಂದುವಾಗಿರುವ ಜೆಎನ್‌ಯು ಕಾರ್ಯಕ್ರಮದಲ್ಲಿ ಕನ್ಹಯ್ಯಿ ರಾಷ್ಟ್ರವಿರೋಧಿ ಘೋಷಣೆಗಳನ್ನು ಕೂಗಿರಲಿಕ್ಕಿಲ್ಲ ಅಥವಾ ಪ್ರಚೋದನಾಕಾರಿ ಭಾಷಣ ಮಾಡಿರಲಿಕ್ಕಿಲ್ಲ ಎಂದು ಗುಪ್ತಚರ ಸಂಸ್ಥೆಗಳು ಮಾಹಿತಿ ನೀಡಿವೆ ಎಂಬ ವರದಿಗಳ ಕುರಿತು ಸುದ್ದಿಗಾರರ ಪ್ರಶ್ನೆಗೆ,‘‘ಕನ್ಹಯ್ಯೆ ವಿರುದ್ಧ ನಮ್ಮಲ್ಲಿ ಸಾಕಷ್ಟು ಸಾಕ್ಷಾಧಾರಗಳಿವೆ ಎಂದು ಉತ್ತರಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು,ಕನ್ಹಯ್ಯೆಗೆ ಕ್ಲೀನ್ ಚಿಟ್ ನೀಡಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿದರು