ಹಿಟ್ ಅಂಡ್ ರನ್ ಪ್ರಕರಣ; ಸಲ್ಮಾನ್ ಖಾನ್‌ಗೆ ಸುಪ್ರೀಮ್ ನೋಟಿಸ್
Update: 2016-02-19 14:39 IST
ಮುಂಬೈ, ಫೆ.19: ಹಿಟ್ ಅಂಡ್ ರನ್ ಪ್ರಕರಣದಲ್ಲಿ ಖುಲಾಸೆಗೊಂಡಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಸುಪ್ರೀಮ್ ಕೋರ್ಟ್ ನೋಟಿಸ್ ಜಾರಿ ಮಾಡಿದೆ.
2002ರ ಹಿಟ್ ಅಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರಕಾರ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.
ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ಸಲ್ಮಾನ್ ಖಾನ್ ಅವರಿಗೆ ನೋಟೀಸ್ ನೀಡಿದೆ.
ಕಳೆದ ಡಿಸೆಂಬರ್ 10ರಂದು ಮುಂಬೈ ಹೈಕೋರ್ಟ್ ಸಲ್ಮಾನ್ ಖಾನ್‌ರನ್ನು ಆರೋಪ ಮುಕ್ತಗೊಳಿಸಿ, ತೀರ್ಪು ನೀಡಿತ್ತು.
.