×
Ad

ರೇಪ್, ಮರ್ಡರ್‌ಗಿಂತ ಬಿಜೆಪಿ-ಆರೆಸ್ಸೆಸ್ ವಿರೋಧವೇ ಬಹುದೊಡ್ಡ ಅಪರಾಧ:ಕೇಜ್ರಿವಾಲ್ ಟೀಕೆ.

Update: 2016-02-19 15:51 IST

ಹೊಸದಿಲ್ಲಿ: ದಿಲ್ಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ರು ಇಂದು ಬೆಳಗ್ಗೆ ಟ್ವೀಟ್ ಮಾಡಿ ಕೇಂದ್ರ ಸರಕಾರ ಹೊಸ ಐಪಿಸಿ ಮಾಡಿದೆ. ಇದರಲ್ಲಿ ರೇಪ್, ಮರ್ಡರ್ ಹಾಗೂ ಯಾರಿಗಾದರೂ ಹೊಡೆದ ದುಷ್ಕರ್ಮಿಗಳು ತಮ್ಮಿಂದ ದೌರ್ಜನ್ಯಕ್ಕೊಳಗಾದವರಿಗೆ ದೇಶದ್ರೋಹಿ ಎಂದು ಮುದ್ರೆಯೊತ್ತಿ ರಕ್ಷೆ ಹೊಂದಬಹುದಾಗಿದೆ ಎಂದು ಕೇಂದ್ರಸರಕಾರದ ವಿರುದ್ಧ ಕಿಡಿಕಾರಿದ್ದಾರೆ.

’ಕೇಂದ್ರದ ಹೊಸ ಐಪಿಸಿಯಂತೆ -ರೇಪ್‌ಮಾಡಿ, ಮರ್ಡರ್ ಮಾಡಿ ಮತ್ತು ಯಾರನ್ನಾದರೂ ಹೊಡೆಯಿರಿ ಮತ್ತು ಯಾರಾದರೂ ಪ್ರಶ್ನಿಸಿದರೆ ಇವರು ದೇಶದ್ರೋಹಿ ಘೋಷಣೆ ಕೂಗುತ್ತಿದ್ದರು ಎನ್ನಿರಿ ನಿಮ್ಮನ್ನು ಬಿಟ್ಟುಬಿಡಲಾವುವುದು’ಎಂದು ಅವರು ಟ್ವೀಟ್ ಮೂಲಕ ಕೇಂದ್ರಸರಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಬಿಜೆಪಿ, ಆರೆಸ್ಸೆಸ್‌ಗಳ ವಿರೋಧಿ ಎನಿಸಿಕೊಳ್ಳುವುದು ಈಗ ಬಹುದೊಡ್ಡ ಅಪರಾಧವಾಗಿದೆ ಎಂದೂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಗುರುವಾರ ರಾಷ್ಟ್ರಪತಿಯನ್ನು ಭೇಟಿಯಾಗಿ ಕೇಜ್ರಿವಾಲ್‌ರು ರಾಜಧಾನಿಯಲ್ಲಿ ನಿರಂತರ ನಡೆಯುತ್ತಿರುವ ಹಿಂಸೆಗಳ ಕುರಿತು ಆತಂಕವನ್ನು ರಾಷ್ಟ್ರಪತಿಗಳೊಂದಿಗೆ ಹಂಚಿಕೊಂಡಿದ್ದರು. ಅವರು ತನ್ನ ಮಂತ್ರಿಮಂಡಲದ ಸಹೋದ್ಯೋಗಿಗಳ ಜೊತೆ ರಾಷ್ಟ್ರಪತಿಯವರನ್ನು ಭೇಟಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News