ಮನೆ ಬದಲಿಸುವುದು ಅಪಮಾನ ಎಂದು ಗಂಡನಿಗೆ ಪತ್ರಬರೆದಿಟ್ಟು ಮಗುವನ್ನು ಕೊಂದು ,ಆತ್ಮಹತ್ಯೆಮಾಡಿಕೊಂಡ ಗೃಹಿಣಿ!
ಕಟ್ಟಪ್ಪನ: ಪತಿಯ ಸಹೋದರ ನಿರಂತರ ಜಗಳ ಮಾಡುತಿದ್ದರಿಂದ ಮನನೊಂದು ಪಾಲಕಂಡಂ ಕುಟ್ಟಿಪುರದ ಶಾಜಿಯ ಪತ್ನಿ ಜಿನ್ಸಿ(25) ತನ್ನ ಪುತ್ರಿ ಅಲಿಯಾ(2)ಳನ್ನು ಕೊಂದು ತಾನು ಬೆಂಕಿ ಹಚ್ಚಿ ಆತ್ಮಹತ್ಯೆ ನಡೆಸಿದ್ದಾರೆಂದು ಪೊಲೀಸರು ಬಹಿರಂಗಪಡಿಸಿದ್ದಾರೆ. ಕೌಟುಂಬಿಕ ಸಮಸ್ಯೆ ಪರಿಹಾರವಿಲ್ಲದಂತೆ ತೀವ್ರಗೊಂಡಾಗ ಜಿನ್ಸಿ ಪ್ರಾಣವನ್ನೇ ಕಳೆದು ಕೊಳ್ಳುವ ನಿರ್ಧಾರ ಕೈಗೊಂಡಿದ್ದಾರೆೆ. ಅವರು ತನ್ನೊಂದಿಗೆ ತನ್ನ ಎಳೆಯ ಮಗುವನ್ನೂ ಕಾಲನ ದವಡೆಗೆ ದೂಡಿದ ಹೃದಯ ವಿದ್ರಾವಕ ಘಟನೆ ನಿನ್ನೆ ಬೆಳಗ್ಗೆ ಒಂಬತ್ತು ಗಂಟೆ ವೇಳೆಗೆ ನಡೆದಿದೆ.
ಶೀಜೊ ಎಂಬಾತನ ಪತ್ನಿಯಾದ ಜಿನ್ಸಿ ಸಮೀಪದ ಆನ್ ಎಯ್ಡೆಡ್ ಸ್ಕೂಲ್ ಅಧ್ಯಾಪಕಿಯಾಗಿದ್ದರು. ಸಹೋದ್ಯೋಗಿಗಳೊಂದಿಗೆ ಮಾತಾಡಿ ಮನೆಗೆ ಮರಳಿಬಂದಿದ್ದ ಆಕೆ ಗಂಡ ಆಟೊ ಚಾಲನೆಗೂ ಗಂಡನ ತಾಯಿ ಕೂಲಿಕೆಲಸಕ್ಕೂ ಹೋದ ಮೇಲೆ ಆಟೊರಿಕ್ಷಾಕ್ಕಾಗಿ ತಂದು ಇರಿಸಲಾಗಿದ್ದ ಹತ್ತು ಲೀಟರ್ ಡೀಸೆಲ್‌ನ್ನು ಮಗುವಿಗೂ ತನ್ನ ಮೈಮೇಲೆಯೂ ಸುರಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಈ ರೀತಿ ತಾಯಿಮಗು ದಾರುಣ ಅಂತ್ಯ ಕಂಡಿದ್ದಾರೆ. ಬೆಳಗ್ಗೆ ತನ್ನ ಮಗುವನ್ನು ಸಮೀಪದ ಮನೆಯವರಿಗೆ ಒಪ್ಪಿಸಿ ಶಾಲೆ ಹೋಗಿದ್ದ ಈ ಶಿಕ್ಷಕಿ ಮತ್ತೆ ಮರಳಿ ಬಂದು ಮಗುವನ್ನು ಅವರಿಂದ ಪಡೆದರಲ್ಲದೆ ಮೊದಲು ಮಗುವಿಗೆ ಡೀಸೆಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಆನಂತರ ತನ್ನ ಮೇಲೆ ಸುರಿದು ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಕಿ ಉರಿಯುತ್ತಿರುವುದನ್ನು ನೋಡಿದ ನೆರೆಯವರು ಮನೆ ಬಾಗಿಲು ಒಡೆದು ಒಳಗೆ ನುಗ್ಗಿದರೂ ಅವರಿಬ್ಬರನ್ನೂ ರಕ್ಷಿಸಲು ಸಾಧ್ಯವಾಗಿರಲಿಲ್ಲ. ತನ್ನ ಗಂಡನ ಅಣ್ಣನ ಮನೆಯವರೊಡನೆ ಆಗಾಗ ಗಲಾಟೆ ನಡೆಯುತ್ತಿದ್ದುದರಿಂದ ಮನೆ ಬದಲಾಯಿಸಲು ಆತ ನಿರ್ಧರಿಸಿದ್ದನೆನ್ನಲಾಗಿದೆ.ೆ "ಅಪಮಾನಸಹಿಸಿ ಬದುಕಲಾರೆ. ಬೇರೆಮನೆಗೆ ಹೋಗುವುದು ಅಪಮಾನವಾಗಿದೆ" ಎಂದು ಗಂಡನಿಗೆ ಡೆತ್ ನೋಟ್ ಬರೆದು ಜಿನ್ಸಿ ತನ್ನ ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.