×
Ad

ಜೆಎನ್ವಿಯ ಮೂವರಿಗೆ ಲುಕ್ ಔಟ್‌ ನೊಟೀಸ್‌

Update: 2016-02-20 13:57 IST

ಹೊಸದಿಲ್ಲಿ, ಫೆ. 20: ಜವಾಹರ್‌ಲಾಲ್‌ ನೆಹರೂ ವಿವಿಯ ಆವರಣದಲ್ಲಿ  ಫೆ.9ರಂದು ದೇಶ ವಿರೋಧಿ ಘೋಷಣೆಗಳನ್ನು ಕೂಗಿದ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ವಿದ್ಯಾರ್ಥಿಗಳಿಗಾಗಿ ದಿಲ್ಲಿ ಪೊಲೀಸರು ಶನಿವಾರ ಲುಕ್‌ ಔಟ್‌ ನೊಟೀಸ್‌ ಜಾರಿ ಮಾಡಿದ್ದಾರೆ.

 ನಾಪತ್ತೆಯಾಗಿರುವ ಈ ಮೂವರು ವಿದ್ಯಾರ್ಥಿಗಳ ಶೋಧದಲ್ಲಿ ಪೊಲೀಸರು ತೊಡಗಿದ್ದಾರೆ. ನಾಪತ್ತೆಯಾಗಿರುವ ಈ ವಿದ್ಯಾರ್ಥಿಗಳ ಮೊಬೈಲ್‌ ಫೋನಿನ ಕರೆ ವಿವರ ದಾಖಲೆಗಳನ್ನು (ಸಿಡಿಆರ್‌) ಸಂಗ್ರಹಿಸಿದ್ದಾರೆ.
ಈಗಾಗಲೇ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹೇಯಾ ಕುಮಾರ್‌ ದೇಶ ದ್ರೋಹದ ಆರೋಪದಲ್ಲಿ ಬಂದಿತನಾಗಿ ತಿಹಾರ್‌ ಜೈಲ್‌ ಸೇರಿದ್ಧಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News