ಭಾರತ- ಶ್ರೀಲಂಕಾ ಆರ್ಥಿಕ ಒಪ್ಪಂದವನ್ನು ವಿರೋಧಿಸಿದ ಶ್ರೀಲಂಕಾದ ವಿಪಕ್ಷಗಳು!
ಕೊಲಂಬೊ: ಶ್ರೀಲಂಕಾದ ಪ್ರತಿಪಕ್ಷ ಭಾರತ ಜೊತೆ ಪ್ರಸಾಪಿಸಲಾದ ಆರ್ಥಿಕ ಹಾಗೂ ತಂತ್ರಜ್ಞಾನ ಸಹಕಾರ ಒಪ್ಪಂದವನ್ನು ವಿರೋಧಿಸಿವೆ. ಸುದ್ದಿ ಸಂಸ್ಥೆ ಸಿನ್ಹುಹಾ ಪ್ರಕಾರ ಪ್ರತಿಪಕ್ಷಗಳು ಹೇಳಿಕೆಯೊಂದರಲ್ಲಿ ಆರ್ಥಿಕ ಹಾಗೂ ತಂತ್ರಜ್ಞಾನದ ಒಪ್ಪಂದ ಮಾಡಿಕೊಳ್ಳುವುದೆಂದರೆ ಆರ್ಥಿಕವಾಗಿ ಹಾಗೂ ತಂತ್ರಜ್ಞಾನಗಳ ನಿಟ್ಟಿನಲ್ಲಿ ಶ್ರೀಲಂಕಾ ಸ್ವಯಂ ಸಾಧಿಸಿ ಕೊಳ್ಳಲು ಸಾಧ್ಯವಿಲ್ಲದ ಸ್ಥಿತಿ ಇದೆ ಎಂದು ಅರ್ಥವಾಗುತ್ತದೆ ಎಂದು ತಿಳಿಸಿವೆ.
ಈಗಿನ ಶ್ರೀಲಂಕಾ ಸರಕಾರ ಸ್ಥಳೀಯ ಜನರೇ ಮಾಡಲು ಸಾಧ್ಯವಿರುವುದೆಲ್ಲವನ್ನು ಭಾರತದ ಸುಪರ್ದಿಗೆ ಒಪ್ಪಿಸಲು ಬಯಸುತ್ತಿದೆ ಎಂಬಂತೆ ಅನಿಸುತ್ತಿದೆ ಎಂದು ಅವು ಶ್ರೀಲಂಕಾ ಸರಕಾರವನ್ನು ಟೀಕಿಸಿವೆ. ವಿರೋಧಪಕ್ಷಗಳವತಿಯಿಂದ ಬಿಡುಗಡೆಗೊಳಿಸಲಾದ ಈ ಹೇಳಿಕೆಯಲ್ಲಿ ಅಧ್ಯಕ್ಷ ಮೈತ್ರಿಪಾಲರ ಪಕ್ಷದ ಕೆಲವು ಎಂಪಿಗಳು ಇದ್ದಾರೆ.
ಯಾವುದೇ ಹೊಸ ಒಪ್ಪಂದಕ್ಕೆ ಬರುವ ಮೊದಲು ಭಾರತದೊಂದಿಗೆ ಮಾಡಿಕೊಂಡಿರುವ ವ್ಯಾಪಾರ ಒಪ್ಪಂದದಲ್ಲಿರುವ ಕೆಲವು ನ್ಯೂನತೆಗಳನ್ನು ಸರಿಪಡಿಸುವುದು ಆವಶ್ಯಕವಾಗಿದೆ ಎಂದು ಸರಕಾರಕ್ಕೆ ಈ ಹೇಳಿಕೆಯಲ್ಲಿ ಅವುಗಳು ಸಲಹೆಯಿತ್ತಿವೆ. ಶ್ರೀಲಂಕಾ 2014ರಲ್ಲಿ ಭಾರತದಿಂದ 402ಕೋಟಿ ಮೂವತ್ತು ಲಕ್ಷ ಡಾಲರ್ ಮೌಲ್ಯದ ಸಾಮಗ್ರಿಗಳನ್ನು ಆಯಾತ ಮಾಡಿಕೊಂಡಿದೆ. ಅದೇ ವೇಳೆ ಭಾರತ ಶ್ರೀಲಂಕಾದಿಂದ 62ಕೋಟಿ 50ಲಕ್ಷ ಡಾಲರ್ ಮೌಲ್ಯದ ಸಾಮಗ್ರಿ ತರಿಸಿಕೊಂಡಿದೆ ಎಂದು ವಿಪಕ್ಷ ಸರಕಾರದ ಗಮನಸೆಳೆದಿವೆ.
ಒಂದುವೇಳೆ ಭಾರತದ ಜೊತೆಗೆ ಮುಕ್ತವ್ಯಾಪಾರ ಸಂಬಂಧ ಸರಿಯಾದ ರೀತಿಯಲ್ಲಿಯೇ ನಡೆಯುವುದಿದ್ದರೆ ಅದರೊಂದಿಗೆ ಆರ್ಥಿಕ ಹಾಗೂ ತಂತ್ರಜ್ಞಾನ ಸಹಕಾರ ಒಪ್ಪಂದ ಮಾಡಿಕೊಳ್ಳಲು ಯಾರಿಂದಲೂ ವಿರೋಧವಿಲ್ಲ. ಆದರೆೆ ಎಲ್ಲದಕ್ಕಿಂತ ಮೊದಲು ಮುಕ್ತ ವ್ಯಾಪಾರ ಒಪ್ಪಂದವನ್ನು ಸರಿಪಡಿಸಿಕೊಳ್ಳಬೇಕಾಗಿದೆ ಎಂದು ವಿಪಕ್ಷಗಳು ಸರಕಾರವನ್ನು ಆಗ್ರಹಿಸಿವೆ.