ದೇಶ ಕಾಯುವ ಯೋಧರ ಕುರಿತು ಕ್ಷುಲ್ಲಕವಾಗಿ ಮಾತಾಡಿ ನಂತರ ತಿದ್ದಿಕೊಂಡ ಸ್ವಾಮಿ ನಿತ್ಯಾನಂದ!
ಬೆಂಗಳೂರು: ನಟಿ ರಂಜಿತಾರೊಂದಿಗೆ ಸಂಬಂಧಿಸಿದ ಲೈಂಗಿಕಾರೋಪದಲ್ಲಿ ತಮಿಳ್ ಮಾಧ್ಯಮಗಳು ಸಿಡಿ ಬಹಿರಂಗಗೊಳಿಸಿ ವಿವಾದಿತ ವ್ಯಕ್ತಿಯಾಗಿ ಪರಿವರ್ತಿತ ಗೊಂಡಿದ್ದ ಸ್ವಾಮಿ ನಿತ್ಯಾನಂದ ಹೊಸ ವಿವಾದವೊಂದನ್ನು ಸೃಷ್ಟಿಸಿದ್ದಾನೆ.
ಈ ಭಾರಿ ಆತ ಭಾರತೀಯ ಸೈನಿಕರನ್ನು ಟೀಕಿಸಿದ್ದು ವೀರ ಮೃತ್ಯು ಆತ್ಮಹತ್ಯೆ ಸಮಾನವೆಂದು ಹೇಳಿದ್ದಾನೆ. ಬೆಂಗಳೂರಿನ ಒಂದು ಆಧ್ಯಾತ್ಮಿಕ ಪ್ರವಚನದಲ್ಲಿ ಸೈನಿಕರ ತ್ಯಾಗದ ಕುರಿತು ಹಗುರವಾಗಿ ಮಾತಾಡಿದ್ದಾನೆ.
ನಿತ್ಯಾನಂದ ವಿರುದ್ಧ ಕರ್ನಾಟಕದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಸೈನಿಕರು ಶತ್ರುಗಳನ್ನು ಕೊಲ್ಲುವುದು ಕೊಲೆಪಾತಕವಾಗಿದೆ. ಸೈನಿಕರು ಯುದ್ಧದಲ್ಲಿ ಕೊಲ್ಲಲ್ಪಡುವುದು ಆತ್ಮಹತ್ಯೆಯಾಗಿ ಲೆಕ್ಕ ಮಾಡಬೇಕಾಗಿದೆ ಎಂದು ಸ್ವಾಮಿ ಹೇಳಿದ್ದಾನೆ. ಕೆಲವು ಮಾಧ್ಯಮಗಳೂ ಈ ಸುದ್ದಿಯನ್ನು ವರದಿಮಾಡಿದ ಹಿನ್ನೆಲೆಯಲ್ಲಿ ಅನೇಕ ಕನ್ನಡ ಸಂಘಟನೆಗಳು ಸ್ವಾಮಿ ವಿರುದ್ಧ ರಂಗಪ್ರವೇಶಿಸಿವೆ. ವಿವಾದಿತ ಸ್ವಾಮಿಯನ್ನು ದೇಶದಿಂದಲೇ ಹೊರಹಾಕಬೇಕೆಂದು ಅವು ಆಗ್ರಹಿಸುತ್ತಿವೆ.ವಿಷಯ ಭಾರೀ ವಿವಾದಕ್ಕೆ ಕಾರಣವಾದೊಡನೆ ನಿತ್ಯಾನಂದ ತನ್ನ ಹೇಳಿಕೆಯನ್ನು ತಿದ್ದಿಕೊಂಡಿದ್ದಾನೆ. ಸೈನಿಕರ ಕುರಿತು ತನಗೆ ಹೆಚ್ಚಿನ ಗೌರವವಿದೆ ಎಂದು ದೇಶವು ಸುರಕ್ಷಿತವಾಗಿರಲು ಅವರು ಕಾರಣವಾಗಿದ್ದಾರೆಂದು ತಿದ್ದಿ ಹೊಸ ಹೇಳಿಕೆಯನ್ನು ಬಿಡುಗಡೆಗೊಳಿಸಿದ್ದಾನೆಂದು ವರದಿಯಾಗಿವೆ.