×
Ad

ಹರ್ಯಾಣ ಉದ್ವಿಗ್ನ , ಐದು ಪಟ್ಟಣಗಳಲ್ಲಿ ಕಪ್ಯೂ

Update: 2016-02-20 17:13 IST

ಹರ್ಯಾಣ, ಫೆ.20: ಜಾಟ್ ಸಮುದಾಯವನ್ನು ಒಬಿಸಿಗೆ ಸೇರಿಸಿ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಹರ್ಯಾಣದಲ್ಲಿ ಜಾಟ್ ಸಮುದಾಯದವರು ನಡೆಸುತ್ತಿರುವ ಚಳವಳಿ, ಹಿಂಸಾಚಾರ ಮತ್ತೆ ಮುಂದುವರಿದಿದ್ದು, ಇನ್ನೂ ಎರಡು ಪಟ್ಟಣಗಳಲ್ಲಿ ಇಂದು ಕರ್ಪ್ಯೂ ಹೇರಲಾಗಿದೆ. ಇದರೊಂದಿಗೆ ಒಟ್ಟು ಐದು ಪಟ್ಟಣಗಳು ಕರ್ಪ್ಯೂನಿಂದ ತತ್ತರಿಸಿದೆ.

ಸೋನಾಪತ್‌ ಮತ್ತು ಗೋಹಾನ ಪಟ್ಟಣದಲ್ಲಿ ಇಂದು ಕರ್ಪ್ಯೂ ಹೇರಲಾಗಿದೆ ಎಂದು ಸೋನಾಪತ್ ಜಿಲ್ಲಾಧಿಕಾರಿ ರಾಜೀವ್‌ ರತನ್ ತಿಳಿಸಿದ್ದಾರೆ.
ರೋಹ್ಟಕ್, ಭಿವಾನಿ, ಝಾಜ್ಜರ‍್ ಪಟ್ಟಣದಲ್ಲಿ  ಈಗಾಗಲೇ ಕರ್ಪ್ಯೂ ಜಾರಿಯಲ್ಲಿದೆ.

ಶಾಂತಿ ಸಾಮರಸ್ಯವನ್ನು ಕಾಪಾಡುವಂತೆ ಹರ್ಯಾಣದ ಮುಖ್ಯಮಂತ್ರಿ ಎಂಎಲ್‌ ಖಟ್ಟರ್‌ ಕರೆ ನೀಡಿದ್ದಾರೆ.
ಇಂದು ಬೆಳಗ್ಗೆ ಪ್ರತಿಭಟನೆಕಾರರು ರೋಹ್ಟಕ್‌ ನ ಮೆಹ್ಯಾಮ್‌ ಪೊಲೀಸ್‌ ಠಾಣೆ, ಪೆಟ್ರೋಲ್ ಪಂಪ್ ಮತ್ತು ಸರಕಾರಿ ಕಟ್ಟಡಕ್ಕೆ ಬೆಂಕಿ ಹಚ್ಚಿದ್ದಾರೆ.
ಹರ್ಯಾಣದ ಜಾಟ್‌ ಸಮುದಾಯದ ಹಿರಿಯ ರಾಜಕಾರಣಿ ಸಚಿವ ಧನಕರ‍್ ಮನೆಗೆ ತಂಡವೊಂದು  ಕಲ್ಲೆಸೆದು ಹಾನಿ ಮಾಡಿದೆ. ಆದರೆ ಮನೆಯೊಳಗಿದ್ದ ಯಾರಿಗೂ  ಗಾಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳಗ್ಗೆ ಜಿಂದಾದಲ್ಲಿ ಭುದಾ ಖೇರಾ  ರೈಲು ನಿಲ್ದಾಣಕ್ಕೆ ದುಷ್ಕರ್ಮಿಗಳು  ಬೆಂಕಿ ಹಚ್ಚಿದ್ದಾರೆ. ಬಹಾದೂರ‍್ಗ್ರಹಾ ಹೈವೆಯನ್ನು ಬಂದ್‌ ಮಾಡಿದ್ದರು...

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News