×
Ad

ಇಸಾಯಿ ಮಂಚ್ ಸ್ಥಾಪನೆ ಪ್ರಸ್ತಾಪ : ಆರ್‌ಎಸ್‌ಎಸ್ ತಂತ್ರಗಾರಿಕೆಗೆ ಮಣಿಯೊಲ್ಲ ಎಂದ ಕ್ರೈಸ್ತ ನಾಯಕರು

Update: 2016-02-20 17:33 IST

ನವದೆಹಲಿ,ಫೆ20 : ಆರೆಸ್ಸೆಸ್ ತನ್ನ ನಾಯಕ ಇಂದ್ರೇಶ್ ಕುಮಾರ್ ಮಾರ್ಗದರ್ಶನದಲ್ಲಿ ತನ್ನಅಂಗಸಂಸ್ಥೆಯಾಗಿರಾಷ್ಟ್ರೀಯ ಇಸಾಯಿ ಮಂಚ್ ಸ್ಥಾಪಿಸುವುದಾಗಿ ಹೇಳಿರುವುದು ಹಲವರು ಕ್ರೈಸ್ತ ನಾಯಕರಿಗೆ ಸರಿ ಕಂಡಿಲ್ಲ.

ಇತ್ತೀಚೆಗೆ ಕ್ರೈಸ್ತ ಸಮುದಾಯದ ಸುಮಾರು 300 ಮಂದಿ ಪ್ರಮುಖ ನಾಯಕರು ಭಾಗವಹಿಸಿದ್ದ ಸಭೆಯೊಂದುಆರ್‌ಎಸ್‌ಎಸ್ ಸಂಘಟನೆಯ ಇಂತಹ ರಾಜಕೀಯ ತಂತ್ರಗಾರಿಕೆಗೆ ಮಣಿಯಬಾರದು ಎಂಬ ನಿರ್ಣಯವನ್ನು ಅಂಗೀಕರಿಸಿದೆ. ದೆಹಲಿಯಲ್ಲಿ ಹಲವಾರು ಚರ್ಚುಗಳಿಗೆ ದುಷ್ಕರ್ಮಿಗಳು ದಾಳಿ ನಡೆದ ಘಟನೆಗಳ ತರುವಾಯ ಒಂದು ವರ್ಷದ ಹಿಂದೆ ಸ್ಥಾಪಿತವಾದ ಯುನೈಟೆಡ್ ಕ್ರಿಶ್ಚಿಯನ್ ಫೋರಂ ಎಂಬ ಸಂಘಟನೆ ಈ ಸಭೆಯನ್ನು ಆಯೋಜಿಸಿತ್ತು. ಬಿಷಪರನ್ನು ಈ ಸಭೆಗೆ ಆಹ್ವಾನಿಸಿದ್ದರೂ ಹೆಚ್ಚಿನವರು ಭಾಗವಹಿಸಿರಲಿಲ್ಲ. ಆದರೂ ಭಾಗವಹಿಸಿದ್ದ ಒಂದಿಬ್ಬರು ಬಿಷಪ್ಪರು ತಾವು ಇಂದ್ರೇಶ್ ಕುಮಾರ್ ಕರೆದಿದ್ದ ಸಭೆಯಲ್ಲಿ ಭಾಗವಹಿಸಿದ್ದರೂ ಇಸಾಯಿ ಮಂಚ್ ಸ್ಥಾಪನೆಯ ಪ್ರಸ್ತಾಪದ ಬಗ್ಗೆ ಮಾತನಾಡುವ ಮೊದಲು ತಾವುಸಭೆಯಿಂದ ಹೊರಬಂದಿರುವುದಾಗಿ ಹೇಳಿದರು.

ದೆಹಲಿಯ ಕ್ರೈಸ್ತ ಸಮುದಾಐವುಮುಸ್ಲಿಮರ ಅಥವ ಸಿಕ್ಖರ ವಿರುದ್ಧದ ಹಿಂಸೆಯ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿಲ್ಲದಿದ್ದರೂ ಅದು1990ರ ದಶಕದಿಂದ ಮುಖ್ಯವಾಗಿ ಕ್ರೈಸ್ತ ಭಗಿನಿಯರು, ಧಾರ್ಮಿಕ ಗುರುಗಳು ಹಾಗೂಸಂಸ್ಥೆಗಳ ಮೇಲಿನ ದಾಳಿಯ ನಂತರಮತೀಯವಾದವನ್ನು ವಿಭಿನ್ನ ದೃಷ್ಟಿಕೋನದಲ್ಲಿ ನೋಡುತ್ತಿದೆ.

ಖ್ಯಾತ ದೇವತಾಶಾಸ್ತ್ರಜ್ಞ ಮತ್ತು ಜೆಸ್ಯೂಟ್ಹಾಗೂ ಹಿಂದೂ ತತ್ವಶಾಸ್ತ್ರದ ವಿದ್ವಾಂಸ ಟಿ ಕೆ ಜಾನ್ ಹೀಗೆ ಹೇಳುತ್ತಾರೆ -‘‘ಬಿಜೆಪಿ ಹಾಗೂ ಅದನ್ನು ಬೆಂಬಲಿಸುವ ಸಂಘ ಪರಿವಾರದ ಅಜೆಂಡಾ ಹಿಂದೂ ರಾಷ್ಟ್ರವಾಗಿದೆ. ಹಿಂಸೆ ಹಾಗೂ ಬೆದರಿಕೆ ತಂತ್ರಗಳ ಮೂಲಕ ಅವರು ಕ್ರೈಸ್ತರು ಹಾಗೂ ಮುಸಲ್ಮಾನರ ವಿರುದ್ಧದ ತಮ್ಮ ವೈರತ್ವವನ್ನು ವ್ಯಕ್ತಪಡಿಸುತ್ತಾರೆ. ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ಸರ್ವರನ್ನೊಳಗಂಡ ಅಭಿವೃದ್ಧಿ ಮಂತ್ರವನ್ನು ಪಠಿಸಿದರೆ, ದೇಶದಲ್ಲಿ ಆರ್‌ಎಸ್‌ಎಸ್ ಧ್ಯೇಯೋದ್ದೇಶಗಳನ್ನು ಈಡೇರಿಸುವ ಪ್ರಯತ್ನ ಮುಂದುವರಿಸುತ್ತಾರೆ.""

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News