ಕೊಚ್ಚಿ ಸ್ಮಾರ್ಟ್ ಸಿಟಿ ದೇಶಕ್ಕೆ ಅರ್ಪಣೆ. ಮೊದಲ ಹಂತದಲ್ಲಿ 5,500 ಮಂದಿಗೆ ಉದ್ಯೋಗ
ಕೊಚ್ಚಿ: ಕೇರಳದ ಕನಸಿನ ಯೋಜನೆಯಾದ ಕೊಚ್ಚಿ ಸ್ಮಾರ್ಟ್ ಸಿಟಿ ವಾಸ್ತವವಾಗಿದೆ. ಕೊಚ್ಚಿ ಕಾಕನಾಡ್ ಇಡಚ್ಚಿರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಮೊದಲ ಕಟ್ಟಡವನ್ನು ಯುಎಇಯ ಕ್ಯಾಬಿನೆಟ್ ಸಚಿವ ದುಬೈ ಹೊಲ್ಡಿಂಗ್ ಚೇರ್‌ಮೆನ್ ಮುಹಮ್ಮದ್ ಅಲ್‌ಗರ್ಗಾವಿ, ಮುಖ್ಯಮಂತ್ರಿ ಉಮ್ಮನ್‌ಚಾಂಡಿ,ಕೇಂದ್ರ ಸಚಿವ ರಾಜೀವ್ ಪ್ರತಾಪ್ ಸಿಂಗ್ ರೂಡಿ, ಸಚಿವ ಕೆ.ಕುಂಞಾಲಿ ಕುಟ್ಟಿ, ದುಬೈ ಹೊಲ್ಡಿಂಗ್ ವೈಸ್ ಚೇರ್‌ಮೆನ್ ಹಾಗೂ ಎಂಡಿಯಾದ ಅಹ್ಮದ್ ಬಿನ್ಬ್ಯಾತ್, ಸ್ಮಾರ್ಟ್ ಸಿಡಿ ಡೈರೆಕ್ಟರ್ ಬೋರ್ಡ್‌ನ ವಿಶೇಷ ಆಮಂತ್ರಿತ ಎಂ. ಎ. ಯೂಸುಫಲಿ ಮುಂತಾದವರು ದೇಶಕ್ಕೆ ಸಮರ್ಪಿಸಿದರು.
246 ಎಕರೆ ವಿಸ್ತೀರ್ಣದ ಸ್ಮಾರ್ಟ್ ಸಿಟಿ ಯೋಜನೆ ಪ್ರದೇಶದಲ್ಲಿ ಮೊದಲ ಹಂತದ ನಿರ್ಮಾಣ ಪೂರ್ತಿಗೊಳಿಸಿ ಅರ್ಧಲಕ್ಷ ಚದರ ಅಡಿಯ ಐಟಿ ಟವರ್ ಒಳಗೊಂಡ ಕಟ್ಟಡವನ್ನು ಉದ್ಘಾಟಿಸಲಾಗಿದೆ. ಎರಡನೆ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮವೂ ನಡೆಯಿತು. ಕೆ.ವಿ. ಥಾಮಸ್ ಎಂ. ಪಿ., ಚೀಫ್ ಸೆಕ್ರಟರಿ ಥಾಮ್ಸನ್, ಎಂಎಲ್‌ಗಳಾದ ಹೈಬಿ ಈಡನ್,ಬೆನ್ನಿ ಬೆಹಾನ್ನನ್ ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಐಟಿ ಅಭಿವೃದ್ಧಿ ಉದ್ದೇಶದೊಂದಿಗೆ ಎರಡನೆ ಘಟ್ಟದಲ್ಲಿಯೂ ಮೊಬಿಲಿಟಿ ಹಬ್‌ಗಳು, ಶಿಕ್ಷಣಸಂಸ್ಥೆಗಳು, ಹಾಸ್ಪಿಟಲಿ ಸಂಸ್ಥೆಗಳು, ಮುಂತಾದ ಮೂಲಭೂತ ಸೌಕರ್ಯಗಳನ್ನು ಉದ್ದೇಶಿಸಲಾಗಿದೆ. ಮೂರನೆ ಘಟ್ಟದಲ್ಲಿಯೂ ಇಂತಹದೇ ಸೌಕರ್ಯಗಳನ್ನೊಳಗೊಂಡ ಸಂಸ್ಥೆಗಳು ಸ್ಮಾರ್ಟ್‌ಸಿಟಿ ಪ್ರವೇಶಿಸಲಿವೆ. ಹೊಸಯೋಜನೆ ಎಂಬ ನೆಲೆಯಲ್ಲಿ ಅಡ್ಡಿಗಳಿಂದರೂ ಒಗ್ಗೂಡಿದ ಶ್ರಮಗಳಿಂದಾಗಿ ಒಂದನೆ ಹಂತವನ್ನು ಪೂರ್ತಿಗೊಳಿಸಲು ಸಾಧ್ಯವಾಗಿದೆ. ಇದೇ ವೇಳೆ ಸಮಾರಂಭವನ್ನು ಪ್ರತಿಪಕ್ಷಗಳು ಬಹಿಷ್ಕರಿಸಿವೆ. ವಿಎಸ್ ಅಚ್ಯುತಾನಂದನ್ ಕಾರ್ಯಕ್ರಮದಿಂದ ದೂರವುಳಿದರು. ಚುನಾವಣೆಯ ಹಿನ್ನೆಲೆಯಲ್ಲಿ ಉದ್ಘಾಟನೆ ನಡೆಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಪ್ರಥಮ ಹಂತದಲ್ಲಿ 27 ಕಂಪೆನಿಗಳು ಸ್ಮಾರ್ಟ್‌ಸಿಟಿಯಲ್ಲಿ ಕಾರ್ಯನಿರ್ವಹಿಸಲಿವೆ. ನಾಲ್ಕುತಿಂಗಳೊಳಗೆ ಅವುಕಾರ್ಯಾರಂಭಿಸಲು ಸಮರ್ಥವಾಗುವುದು. 5,500 ಮಂದಿಗೆ ಮೊದಲ ಹಂತದಲ್ಲಿ ಕೆಲಸ ದೊರಕಲಿದೆ. ಮಾಲ್ಟ, ದುಬೈಗಳಲ್ಲಿ ಸ್ಮಾರ್ಟ್ ಸಿಟಿಗಳಿವೆ. 2005ರಲ್ಲಿ ಟೀಕೊಂ ಕಂಪೆನಿಯೊಂದಿಗೆ ಯುಡಿಎಫ್ ಸರಕಾರ ಸ್ಮಾರ್ಟ್ ಸಿಟಿ ಕುರಿತು ಸಹಮತ ಏರ್ಪಟ್ಟಿತ್ತು. ನಂತರ 2007ರಲ್ಲಿ ಎಲ್‌ಡಿಎಫ್ ಸರ್ಕಾರ ಒಪ್ಪಂದಕ್ಕೆ ಸಹಿಹಾಕಿತ್ತು. 2013ರಲ್ಲಿ ಮೊದಲ ಹಂತದ ನಿರ್ಮಾಣ ಕಾಮಗಾರಿ ಆರಂಭವಾಗಿದ್ದವು.