ಅಲಿಗಡದಲ್ಲಿ ಹುಡುಗಿಯರಿಗೆ ಮೊಬೈಲ್ ಬಳಸದಂತೆ ನಿರ್ಬಂಧ: ಉಲ್ಲಂಘಿಸಿದರೆ ಶಿಕ್ಷೆ!
ಉತ್ತರಪ್ರದೇಶ: ಪ್ರಧಾನಿ ನರೇಂದ್ರ ಮೋದಿ ಡಿಜಿಟಲ್ ಇಂಡಿಯದ ಕನಸು ಕಾಣುತ್ತಿದ್ದರೆ ಆದರೆ ಇಲ್ಲಿ ಹುಡುಗಿಯರು ಮೊಬೈಲ್ ಉಪಯೋಗಿಸುವುದಕ್ಕೆ ನಿರ್ಬಂಧ ಹೇರಲಾಗಿದೆ. ಇತ್ತೀಚಿನ ವರದಿಯಂತೆ ಅಲಿಗಡದ ಪಂಚಾಯತ್ ಹದಿನೆಂಟು ವರ್ಷಕ್ಕಿಂತ ಕಡಿಮೆವಯಸ್ಸಿನ ಹುಡುಗಿಯರು ಮೊಬೈಲ್ ಫೋನ್ ಬಳಸುವುದನ್ನು ನಿಷೇಧಿಸಿದೆ. ಪಂಚಾಯತ್‌ಗೆ ತನ್ನ ಆದೇಶವ ವಿರೋಧಿಸಲ್ಪಡುವ ಆತಂಕವೂ ಇದೆ.
ಪಂಚಾಯತ್ ಸದಸ್ಯ ಹಾಗೂ ಗ್ರಾಮದ ಹಿರಿಯ ವ್ಯಕ್ತಿ ರಾಮ್‌ವೀರ್ ಸಿಂಗ್ ಯಾರಾದರೂ ಶರಾಬು ಮಾರಿದರೆ ಮತ್ತು ಯಾವುದಾದರೂ ಹುಡುಗಿ ಮೊಬೈಲ್ ಬಳಸಿದರೆ ಅವರಿಗೆ ಎಂಟು ದಿವಸಗಳವರೆಗೆ ಶಾರೀರಿಕ ಶಿಕ್ಷೆ ನೀಡಲಾಗುವುದು ಎಂದು ಹೇಳಿದ್ದಾರೆ. ಎರಡು ದಿವಸ ಮೊದಲು ಗುಜರಾತ್ ಮೊಹ್ಸಾನದಲ್ಲಿ ಕೂಡಾ ಹುಡುಗಿಯರು ಮೊಬೈಲ್ ಬಳಸದಂತೆ ಬ್ಯಾನ್ ಹಾಕಲಾಗಿತ್ತು. ಮೊಹ್ಸಾನಾದ ಒಂದುಗ್ರಾಮದಲ್ಲಿ ಯುವತಿಯರು ಮೊಬೈಲ್ ಬಳಸಬಾರದು ಎಂದು ಆದೇಶಿಸಲಾಗಿದೆ. ಹುಡುಗಿ ಬಳಿ ಮೊೈಲ್ ಕಂಡರೆ 2100 ರೂ. ಜುಲ್ಮಾನೆ.
ಮಾಹಿತಿಕೊಡುವವರಿಗೆ ಇನ್ನೂರು ರೂಪಾಯಿ ಬಹುಮಾನ ಘೋಷಿಸಲಾಗಿದೆ. ಗುಜಾರಾತ್ ರಾಜಕೀಯದಲ್ಲಿ ಪ್ರಭಾವಿಗಳಾದ ಠಾಕೂರ್ ಸಮುದಾಯ ಇದನ್ನು ಪ್ರಾರಂಭಿಸಿವೆ.