×
Ad

ಗೇಮಿಂಗ್, ಆ್ಯಪ್ ಆಧಾರಿತ ಆಹಾರ

Update: 2016-02-20 23:40 IST

ಹೊಸದಿಲ್ಲಿ, ಫೆ.20: ಕೇಂದ್ರ ಸರಕಾರದ ಸ್ಟಾರ್ಟ್-ಅಪ್ ಉತ್ತೇಜನಾ ಕಾರ್ಯ ಕ್ರಮದ ಅಂಗವಾಗಿ ರೈಲುಗಳಲ್ಲಿ ಗೇಮಿಂಗ್, ಆನ್‌ಲೈನ್ ಆಹಾರ ಆರ್ಡರ್ ತೆಗೆದುಕೊಳ್ಳುವ ಸಂಸ್ಥೆಗಳು ಹಾಗೂ ಕ್ಯಾಟಲಾಗ್ ಆಧರಿತ ರಿಟೇಲಿಂಗ್ ಸೇವೆಗಳನ್ನು ಪ್ರಯಾಣಿಕರ ಅನುಕೂಲಕ್ಕಾಗಿ ಪ್ರಾರಂಭಿಸಲು ರೈಲ್ವೆ ಇಲಾಖೆ ಚಿಂತಿಸುತ್ತಿದ್ದು ಈ ಬಗ್ಗೆ ಮುಂದಿನ ವಾರದಲ್ಲಿ ರೈಲ್ವೆ ಸಚಿವ ಸುರೇಶ್ ಪ್ರಭು ಪ್ರಸ್ತುತಪಡಿಸಲಿರುವ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗುವುದು ಎಂದು ಹೇಳಲಾಗುತ್ತಿದೆ.
 ಕೇಂದ್ರ ಸರಕಾರವು ಇತ್ತೀಚೆಗೆ ರೂ 10,000 ಕೋಟಿಯ ಕಾರ್ಪಸ್ ನಿಧಿಯನ್ನು ಸ್ಟಾರ್ಟ್-ಅಪ್ ಸಂಸ್ಥೆಗಳಿಗೆ ಘೋಷಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News