×
Ad

ನೀರ್ಜಾಳನ್ನು ಅನಗತ್ಯವಾಗಿ ವೈಭವೀಕರಿಸಲಾಗಿದೆ: ಅಸಮಾಧಾನಗೊಂಡ ನೂಪುರ್ ಅಬ್ರೋಲ್

Update: 2016-02-22 11:01 IST

ಮುಂಬೈ: ಮೂವತ್ತು ವರ್ಷಗಳ ಹಿಂದೆ ಅಪಹರಣಕ್ಕೊಳಗಾದ ಪ್ಯಾನ್ ಆ್ಯಮ್ ವಿಮಾನದ 358 ಪ್ರಯಾಣಿಕರಿಗಾಗಿ ತನ್ನ ಜೀವವನ್ನೇ ಬಲಿಗೊಟ್ಟು ರಕ್ಷಿಸಿದ ನೀರ್ಜಾ ಭಾನೋಟ್ ಜೀವನ ಕಥೆಯಾಧರಿತಸೋನಂ ಕಪೂರ್ ಅಭಿನಯದ ಚಿತ್ರ ‘ನೀರ್ಜಾ’ ಪ್ರಶಂಸೆಯ ಮಹಾಪೂರವನ್ನೇ ಹರಿಸಿರುವಂತೆಯೇನೀರ್ಜಾಳನ್ನು ಅನಗತ್ಯವಾಗಿವೈಭವೀಕರಿಸಲಾಗಿದೆಯೆಂದು ಆಕೆಯ ಜತೆ ಆ ದುರದೃಷ್ಟಕರ ವಿಮಾನದಲ್ಲಿದ್ದ ಇನ್ನೊಬ್ಬ ಪರಿಚಾರಿಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಡೀ ಪ್ರಕರಣವನ್ನು ತಪ್ಪಾಗಿ ಚಿತ್ರೀಕರಿಸಲಾಗಿದೆಯೆಂದು ನೀರ್ಜಾಳ ಜತೆ ಆ ವಿಮಾನದಲ್ಲಿದ್ದ ಆಕೆಯ ಸಹೋದ್ಯೋಗಿ ನೂಪುರ್ ಅಬ್ರೋಲ್ ಆಪಾದಿಸಿದ್ದಾರೆ.
ತನ್ನ ಫೇಸ್ಬುಕ್ ಪುಟದಲ್ಲಿ ನೂಪುರ್ ಹೀಗೆಂದು ಬರೆದಿದ್ದಾರೆ : ‘‘ಹೌದು ಅದು ನಿಜವಾಗಿಯೂ ಒಂದು ಕಷ್ಟಕರ ಸನ್ನಿವೇಶವಾಗಿತ್ತು. ಆದರೆ ಆ ವಿಮಾನದಲ್ಲಿದ್ದ ಇತರ ಪರಿಚಾರಿಕೆಯರಿಗೂ ಈ ಚಿತ್ರ ಅನುಚಿತವಾಗಿ ನೀರ್ಜಾಳನ್ನು ಒಬ್ಬ ಅದ್ಭುತ ಮಹಿಳೆಯಾಗಿ ಚಿತ್ರೀಕರಿಸಿರುವುದನ್ನು ನೋಡಿ ಕಷ್ಟವಾಗಿ ಬಿಟ್ಟಿದೆ. ಆಕೆಯ ಆತ್ಮ ಕೂಡ ಈ ಅನಗತ್ಯ ವೈಭವೀಕರಣ ಹಾಗೂ ಪ್ರಶಂಸೆಯನ್ನು ನೋಡಿ ತಲೆತಗ್ಗಿಸಬಹುದು. ವಾಸ್ತವವಾಗಿ ಈ ಅಗ್ನಿಪರೀಕ್ಷೆಯನ್ನು ಎದುರಿಸಿದ್ದ ಇತರ ವಿಮಾನ ಪರಿಚಾರಿಕೆಯರಿಗೆ ಅನ್ಯಾಯವಾಗಿದೆ!"


ಮತ್ತೆ ಮುಂದುವರಿದ ಅಕೆ ‘‘ಓಹ್ ಇಲ್ಲ! ಆ ಸನ್ನಿವೇಶದಲ್ಲಿ ನಾನು ಅಮುಖ್ಯ.ಆಸ್ಟ್ರಿಡ್, ಶಿರೀನ್, ಸನ್‌ಶೈನ್ ಹಾಗೂ ಮೆಸ್ಸಿ ಆ ದಿನದ ನಿಜವಾದ ಹೀರೋಗಳಾಗಿದ್ದರು. ಇಂದು ನಾನು ಅವರಿಗೆ ಧನ್ಯವಾದ ಹೇಳಬಹುದೆಂದು ನನಗೆ ಸಂತಸವಾಗುತ್ತಿದೆ,’’ಎಂದಾಕೆ ಬರೆದಿದ್ದಾರೆ.
ವಿಮಾನದಲ್ಲಿದ್ದ ಮೂರು ಮಕ್ಕಳನ್ನು ರಕ್ಷಿಸುವಾಗ ನೀರ್ಜಾಳಿಗೆ ಗುಂಡಿಕ್ಕಲಾಗಿತ್ತು. ವಿಮಾನದಲ್ಲಿದ್ದ 359 ಜನರ ಜೀವಗಳನ್ನು ಉಳಿಸಲು ಆಕೆ ಯಶಸ್ವಿಯಾಗಿದ್ದರೂ ಆಕೆಗೆ ತನ್ನನ್ನು ಕಾಪಾಡಿಕೊಳ್ಳಲಾಗಿಲ್ಲ.ಆದರೆ ನೂಪುರ್ ಹೇಳಿರುವುದು ನಿಜಕ್ಕೂ ಆಘಾತಕಾರಿ. ಚಿತ್ರ ತಂಡ ಇದಕ್ಕೆ ಹೇಗೆ ಪ್ರತಿಕ್ರಿಯಿಸುವುದೆಂದು ಕಾದು ನೋಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News