ಆರ್ಮಿ ಕ್ಯಾಪ್ಟನ್ ತುಷಾರ್ ಮಹಾಜನ್ ಹುತಾತ್ಮ
ಉದಮ್‌ಪುರ, ಫೆ.22:ಜಮ್ಮು ಮತ್ತು ಕಾಶ್ಮೀರದ ಪಾಂಪೊರ್‌ನಲ್ಲಿ ಉಗ್ರರೊಂದಿಗೆ ನಡೆಸಿದ ಗುಂಡಿನ ಚಕಮಕಿಯಲ್ಲಿ ಗಾಯಗೊಂಡಿದ್ದ ಯೋಧ 10 ಪ್ಯಾರಾ ಸ್ಪೆಷಲ್ ಫೋರ್ಸ್ ನ ಕ್ಯಾಪ್ಟನ್ ತುಷಾರ್ ಮಹಾಜನ್ ರವಿವಾರ ಮೃತಪಟ್ಟಿದ್ದಾರೆ.
ಉಗ್ರರ ವಿರುದ್ಧದ ಸೇನಾ ಕಾರ್ಯಾಚರಣೆ ಮೂರನೆ ದಿನಕ್ಕೆ ಕಾಲಿರಿಸಿದೆ. ಗುಂಡಿನ ಚಕಮಕಿಯಲ್ಲಿ ಮೃತಪಟ್ಟವರ ಸಂಖ್ಯೆ ಏಳಕ್ಕೇರಿದೆ. ಕ್ಯಾಪ್ಟನ್ ತುಷಾರ್ ಮಹಾಜನ್ , ಕ್ಯಾಪ್ಟನ್ ಪವನ್ ಕುಮಾರ್, ಲ್ಯಾನ್ಸ್ ನಾಯ್ಕ್ ಓಮ್ ಪ್ರಕಾಶ್ ,ಇಬ್ಬರು ಸಿಆರ್‌ಎಫ್ ಹೆಡ್ ಕಾನ್ ಸ್ಟೇಬಲ್‌ಗಳಾದ ಆರ್‌ಕೆ ರಾಣಾ ಮತ್ತು ಭೋಲಾ ಸಿಂಗ್, ಇಡಿಐ ಉದ್ಯೋಗಿ ಅಬ್ದುಲ್ ಘನಿ ಮಿರ್ ಬಲಿಯಾಗಿದ್ದಾರೆ. ಓರ್ವ ಉಗ್ರನನ್ನು ಕೊಲ್ಲಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ನಿವೃತ್ತ ಪ್ರಾಂಶುಪಾಲ ದೇವ್ ರಾಯ್ ಗುಪ್ತಾ ಪುತ್ರ :ತುಷಾರ್ ಶುಕ್ರವಾರ ಉಗ್ರರನ್ನು ಸದೆ ಬಡಿಯುವ ಹೋರಾಟ ನಡೆಸುತ್ತಿದ್ದಾಗ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಉದಮ್‌ಪುರದ ಶಿಕ್ಷಣ ತಜ್ಞ ಮತ್ತು ನಿವೃತ್ತ ಪ್ರಾಂಶುಪಾಲ ದೇವ್ ರಾಯ್ ಗುಪ್ತಾ ಅವರ ಪುತ್ರ ತುಷಾರ್ ಅವರು ಒಂದರಿಂದ ಎಂಟರ ತನಕ ಲಿಟ್ಲ್ ಫ್ಲೆವರ್ ಕಾನ್ವೆಂಟ್‌ನಲ್ಲಿ , ಬಳಿಕ ಹ್ಯಾಪಿ ಮೋಡಲ್ ಹೈಯರ್ ಸೆಕಂಡರಿ ಸ್ಕೂಲ್‌ನಲ್ಲಿ 12ನೆ ತರಗತಿ ತನಕ ಶಿಕ್ಷಣ ಪಡೆದಿದ್ದರು.ಅನಂತರ ನ್ಯಾಶನಲ್ ಡಿಫೆನ್ಸ್ ಅಕಾಡೆಮಿ (ಎನ್‌ಡಿಎ)ಸೇರಿದ್ದರು.