ದೀಪಾವಳಿ ನಂತರ ರಾಮಮಂದಿರ ನಿರ್ಮಾಣ: ಸುಬ್ರಮಣಿಯನ್ ಸ್ವಾಮಿ
Update: 2016-02-22 13:06 IST
ಹೊಸದಿಲ್ಲಿ,ಫೆ.22: ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅಯೋಧ್ಯೆಯಲ್ಲಿ ರಾವ ಮಂದಿರ ನಿರ್ಮಾಣವನ್ನು ಈ ವರ್ಷ ದೀಪಾವಳಿಯ ನಂತರ ಪ್ರಾರಂಭಿಸಲಾಗುವುದು ಎಂದು ಹೇಳಿದ್ದಾರೆ.
ಸ್ವಾಮಿ ಆರೆಸ್ಸೆಸ್ ಪ್ರಚಾರ ವಿಭಾಗದ ಮೂಲಕ ಆಯೋಜಿಸಲಾದ ಕಾರ್ಯಕ್ರಮವೊಂದರಲ್ಲಿ ರಾಮ್ ಜನ್ಮಭೂಮಿ ಉಬರ್‌ತಾ ಪರಿದೃಶ್ಯ್ ಎಂಬ ವಿಷಯದಲ್ಲಿ ಮಾತಾಡಿ ಅಲಾಹಾಬಾದ್ ಹೈಕೋರ್ಟ್ ನಲ್ಲಿ ಹಾಜರುಪಡಿಸಲಾದ ಎಲ್ಲ ಸಾಕ್ಷ್ಯಗಳತ್ತ ಬೊಟ್ಟು ಮಾಡಿ ಬಾಬರಿ ಮಸೀದಿ ಕೆಡವಲಾದ ಸ್ಥಳದಲ್ಲಿಯೇ ರಾಮಮಂದಿರ ಇತ್ತು. ಆದ್ದರಿಂದ ಅಲ್ಲಿ ರಾಮಮಂದಿರ ನಿರ್ಮಾಣವಾಗಬೇಕಿದೆ ಎಂದು ಹೇಳಿದ್ದಾರೆ.
ಮುಸ್ಲಿಮ್ ಸಮುದಾಯ ಭೂಮಿಯ ಆ ತುಂಡಿಗಾಗಿ ತಮ್ಮ ವಾದವನ್ನು ಮಂಡಿಸುವುದನ್ನು ನಿಲ್ಲಿಸಬೇಕಾಗಿದೆ. ಇದನ್ನು ಹಿಂಸೆಯ ಹಿನ್ನೆಲೆಯಲ್ಲಿ ಗಳಿಸಿಕೊಳ್ಳಲು ನಾವು ಬಯಸುವುದಿಲ್ಲ ಎಂದು ಹೇಳಿದರಲ್ಲದೆ, ಒಂದುವೇಳೆ ಶಾಂತಿಪೂರ್ವಕ ಪರಿಹಾರ ಇದಕ್ಕೆ ಆಗುವುದಿಲ್ಲವಾದರೆ ಇತರ ಉಪಾಯಗಳ ಮೂಲಕ ಭೂಮಿಯನ್ನು ಗಳಿಸಲಾಗುವುದು ಎಂದು ಸ್ವಾಮಿ ಹೇಳಿದ್ದಾರೆ.