ದಿಲ್ಲಿನೀರು ಸರಬರಾಜು ಕಾಲುವೆ ಮೇಲೆ ಸೇನೆ ನಿಯಂತ್ರಣ ಸಾಧಿಸಿದೆ: ಕೇಜ್ರಿವಾಲ್ ಟ್ವೀಟ್
ಹೊಸದಿಲ್ಲಿ,ಫೆ.22: ಜಾಟ್ ಮೀಸಲಾತಿಯ ಬೆಂಕಿ ದಿಲ್ಲಿಯ ಸಾರ್ವಜನಿಕ ನೀರು ಸರಬರಾಜು ವ್ಯವಸ್ಥೆಯನ್ನು ಬುಡಮೇಲುಗೊಳಿಸಿದ್ದ ಹಿನ್ನೆಲೆಯಲ್ಲಿ ಚಿಂತಿತರಾಗಿದ್ದ ದಿಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ಇಂದು ಟ್ವೀಟ್ ಮಾಡಿ ದಿಲ್ಲಿ ಜನರಿಗೆ ಶುಭ ಸುದ್ದಿ ತಿಳಿಸಿದ್ದಾರೆ.
ಸೈನ್ಯವು ಮುನಕ್ ಕಾಲುವೆಯ ಮೇಲೆ ನಿಯಂತ್ರಣ ಸಾಧಿಸಿದ್ದು ಜಾಟ್ ಹೋರಾಟಗಾರರು ಮೂರು ದಿವಸಗಳಿಂದ ಉಂಟು ಮಾಡಿದ್ದ ಅಡ್ಡಿಯನ್ನು ತೆರವುಗೊಳಿಸಲಾಗಿದೆ ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಮುನಕ್ ಕಾಲುವೆಯ ನೀರನ್ನು ತಡೆಹಿಡಿದಿದ್ದ ಹಿನ್ನೆಲೆಯಲ್ಲಿ ದಿಲ್ಲಿಯ ಏಳು ಜಸಂಗ್ರಾಹಲಯಗಳು ಬರಿದಾಗಿದ್ದವು. ದಿಲ್ಲಿಗೆ ಶೇ.60 ರಷ್ಟು ನೀರು ಹರ್ಯಾಣದ ಈ ಕಾಲುವೆಯಿಂದ ಸರಬರಾಜು ಆಗುತ್ತಿದೆ. ಈ ಕುರಿತು ಸೋಮವಾರ ಟ್ವೀಟ್ ಮಾಡಿದ ಕೇಜ್ರಿವಾಲ್ ನೀರು ದಿಲ್ಲಿ ಜನರಿಗೆ ತಲುಪಲು ಎಷ್ಟು ಸಮಯ ಹಿಡಿಸೀತು ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸಲಾಗುತ್ತಿದೆ.
ದಿಲ್ಲಿಗೆ ಸರಬರಾಜು ಆಗುವ ಪೈಪ್‌ಲೈನ್‌ಗೆ ಹಾನಿಯೆಸಗಲಾಗಿದೆಯೇ ಎಂಬುದು ಗೊತ್ತಿಲ್ಲ ಒಂದು ವೇಳೆ ದಿಲ್ಲಿಗೆ ಬೆಳಗ್ಗೆ ನೀರು ಹರಿಸಿದರೂ ಸಂಜೆ ವೇಳೆಗಷ್ಟೆ ದಿಲ್ಲಿ ಜನರಿಗೆ ದೊರೆಯುತ್ತದೆ ಎಂದೂ ಕೇಜ್ರಿವಾಲ್ ಟ್ವೀಟ್ ಮೂಲಕ ತಿಳಿಸಿದ್ದಾರೆ