ರಾಜಧಾನಿಯಲ್ಲಿ ನೀರು ಪೂರೈಕೆ ಅಸ್ತವ್ಯಸ್ತ; ಹರ್ಯಾಣ ಸರಕಾರದ ಸ್ಟೇಟಸ್ ವರದಿ ಕೇಳಿದ ಸುಪ್ರೀಂ
Update: 2016-02-22 13:40 IST
ಹೊಸದಿಲ್ಲಿ, ಫೆ.22: ಜಾಟ್ ಸಮುದಾಯದ ಮೀಸಲಾತಿ ಹೋರಾಟದಿಂದಾಗಿ ರಾಜಧಾನಿ ದಿಲ್ಲಿಗೆ ಹರ್ಯಾಣದ ಮುನಾಕ್ ಕ್ಯಾನಲ್ ನೀರು ಪೂರೈಕೆಯಾಗದ ವಿಚಾರದ ಬಗ್ಗೆ ಸ್ಟೇಟಸ್ ವರದಿ ನೀಡುವಂತೆ ಸುಪ್ರೀಂ ಕೋರ್ಟ್ ಇಂದು ಆದೇಶ ನೀಡಿದೆ.
ಹರ್ಯಾಣದ ಮುನಾಕ್ ಕೆನಾಲ್ ಮೂಲಕ ದಿಲ್ಲಿಗೆ ಪೂರೈಕೆಯಾಗುವ ನೀರು ಸರಬರಾಜು ವ್ಯವಸ್ಥೆಗೆ ಧಕ್ಕೆ ಉಂಟಾಗಿದೆ. .ದಿಲ್ಲಿಯ ಹಲವು ಪ್ರದೇಶಗಳಲ್ಲಿ ನೀರಿಗೆ ಭಾರಿ ಅಭಾವವಾದ ಹಿನ್ನಲೆಯಲ್ಲಿ ಹಿನ್ನಲೆಯಲ್ಲಿ ಎಲ್ಲ ಶಾಲೆಗಳಿಗೆ ದಿಲ್ಲಿ ಸರಕಾರ ರಜೆ ಘೋಷಣೆ ಮಾಡಿದೆ..
ನೀರು ಅಭಾವ ಉಂಟಾದ ಹಿನ್ನಲೆಯಲ್ಲಿ ದಿಲ್ಲಿ ಸರಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿತ್ತು. ಮುಖ್ಯ ನ್ಯಾಯಮೂರ್ತಿ ಟಿಎಸ್ ಠಾಕೂರ್ ಈ ವಿಚಾರಕ್ಕೆ ಸಂಬಂಧಿಸಿ ಹರ್ಯಾಣ ಸರಕಾರದ ವರದಿ ಕೇಳಿರುವ ಜೊತೆಗೆ ಕೇಂದ್ರ ಸರಕಾರ ಮತ್ತು ಉತ್ತರ ಪ್ರದೇಶ ಸರಕಾರಕ್ಕೂ ನೊಟೀಸ್ ಜಾರಿ ಮಾಡಿದೆ.