×
Ad

ಬನಾರಸ್ ಹಿಂದೂ ವಿವಿಯಲ್ಲಿ ವಿದ್ಯಾರ್ಥಿ ಸಂಘ ಚುನಾವಣೆ ನಡೆಸಲು ಪ್ರಧಾನಿ ಮುಂದೆ ಆಗ್ರಹಿಸಿದ ವಿದ್ಯಾರ್ಥಿಗೆ ಥಳಿತ

Update: 2016-02-22 15:49 IST

ವಾರಣಾಸಿ : ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಚುನಾವಣೆಗಳನ್ನು ನಡೆಸಬೇಕೆಂದು ವಿಶ್ವವಿದ್ಯಾನಿಲಯದ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದಪ್ರಧಾನಿ ನರೇಂದ್ರ ಮೋದಿಯವರ ಸಮ್ಮುಖದಲ್ಲಿ ಆಗ್ರಹಿಸಿದವಿದ್ಯಾರ್ಥಿ ನಾಯಕನೊಬ್ಬನನ್ನು ಸಾರ್ವಜನಿಕರು ಥಳಿಸಿದ ಘಟನೆ ಸೋಮವಾರ ವಾರಣಾಸಿಯಲ್ಲಿ ನಡೆದಿದೆ.ಅಶುತೋಷ್ ಸಿಂಗ್ ಎಂಬ ವಿದ್ಯಾರ್ಥಿ ನಾಯಕ ಪ್ರಧಾನಿ ತಮ್ಮ ಭಾಷಣ ಮುಗಿಸುತ್ತಿದ್ದಂತೆ ಮೇಲಿನ ಬೇಡಿಕೆಯನ್ನು ಮುಂದಿರಿಸಿದ್ದ. ಕೂಡಲೇ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡರೂ ಆತನನ್ನು ಸ್ವಲ್ಪ ಹೊತ್ತಿನಲ್ಲಿ ಬಿಡುಗಡೆ ಮಾಡಲಾಗುವುದೆಂದು ಹೇಳಲಾಗಿದೆ.

ತಮ್ಮ ಲೋಕಸಭಾ ಕ್ಷೇತ್ರವಾರಣಾಸಿಗೆ ಆಗಮಿಸಿರುವ ಮೋದಿ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಘಟಿಕೋತ್ಸವವಲ್ಲದೆ, 15ನೇ ಶತಮಾನದ ದಲಿತ ಕವಿ ರವಿದಾಸ್ ಅವರಜನ್ಮದಿನಾಚರಣೆ ಸಮಾರಂಭದಲ್ಲೂ ಭಾಗವಹಿಸಲಿದ್ದಾರೆ.

ಪ್ರಧಾನಿಯಾದ ನಂತರ ಮೋದಿ ವಾರಣಾಸಿಗೆ ಭೇಟಿ ನೀಡುತ್ತಿರುವುದು ಇದು ಆರನೇ ಬಾರಿಯಾಗಿದೆ. ಜನವರಿ 22ರಂದು ಕೂಡ ಅವರು ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿದ್ದರು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News