×
Ad

ಇಂದು ರೈಲ್ವೆ ಬಜೆಟ್ 2016-17: ರಾಜ್ಯಕ್ಕೆ ಲಾಭವಾಗಲಿದೆಯೇ?

Update: 2016-02-24 23:56 IST

ಬೆಂಗಳೂರು, ಫೆ.24: ಲೋಕಸಭೆಯಲ್ಲಿ ರೈಲ್ವೆ ಸಚಿವ ಸುರೇಶ್ ಪ್ರಭು ಗುರುವಾರ ಮಂಡಿಸಲಿರುವ 2016-17ನೆ ಸಾಲಿನ ರೈಲ್ವೆ ಮುಂಗಡ ಪತ್ರದ ಬಗ್ಗೆ ರಾಜ್ಯದ ನಿರೀಕ್ಷೆ ಬೆಟ್ಟದಷ್ಟಿದ್ದು, ಈ ಬಾರಿ ಬೆಂಗಳೂರು- ಮೈಸೂರು ನಡುವೆ ಸ್ಪೀಡ್ ರೈಲು ಹಾಗೂ ರಾಜಧಾನಿ ಬೆಂಗಳೂರು ಆಸುಪಾಸಿನ ಉಪನಗರಗಳ ರೈಲು ಸೇವೆ ಸಾಕಾರಗೊಳ್ಳುವುದೇ ಎನ್ನುವ ಕುತೂಹಲ ಗರಿಗೆದರಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಂಬಂಧ ರೈಲ್ವೆ ಸಚಿವ ಸುರೇಶ್ ಪ್ರಭು ಅವರಿಗೆ ಪತ್ರ ಬರೆದಿದ್ದು, ಈ ಬಾರಿ ಸ್ಪೀಡ್ ರೈಲು ಸೇವೆ ದೊರಕಿಸಿಕೊಡುವಂತೆ ಮನವಿ ಮಾಡಿದ್ದಾರೆ. ಜತೆಗೆ ಸಬರ್ಬನ್ ರೈಲು ಸೇವೆಗೂ ಆದ್ಯತೆ ನೀಡುವಂತೆ ಕೋರಿದ್ದಾರೆ.

ಈ ತಿಂಗಳ ಮೊದಲ ವಾರದಲ್ಲಿ ನಡೆದ ಇನ್ವೆಸ್ಟ್ ಕರ್ನಾಟಕ ಜಾಗತಿಕ ಹೂಡಿಕೆದಾರರ ಸಮ್ಮೇಳನದಲ್ಲಿ ಸುರೇಶ್ ಪ್ರಭು ನಗರಕ್ಕೆ ಸಬರ್ಬನ್ ರೈಲು ಸೇವೆ ಒದಗಿಸಲಾಗುವುದು ಎಂದು ಭರವಸೆ ನೀಡಿದ್ದರು. ಇದು ಕೂಡ ಸರಕಾರಕ್ಕೆ ಆಶಾಕಿರಣ ಮೂಡಿಸಿದೆ. ವ್ಯಾಪಾರ, ಉದ್ದಿಮೆಗಳ ಅಭಿವೃದ್ಧಿಗೆ ಚೆನ್ನೈ-ಮುಂಬೈ ನಡುವೆ ಬಳ್ಳಾರಿ ಮಾರ್ಗವಾಗಿ ರೈಲು ಸಂಚಾರ ಅಗತ್ಯವಾಗಿದೆ. ಸಿರಗುಪ್ಪ-ಸಿಂಧನೂರು, ಲಿಂಗಸುಗೂರು, ಕುಡಚಿ ರೈಲ್ವೆ ಮಾರ್ಗ ಕಾಮಗಾರಿ ಆರಂಭ ವಾಗಬೇಕಾಗಿದೆ.

ಬಳ್ಳಾರಿ- ರಾಯದುರ್ಗ- ಕಲ್ಯಾಣ ದುರ್ಗಂ-ತುಮಕೂರು ಮಾರ್ಗ ಕಾಮಗಾರಿ ಪೂರ್ಣ ಗೊಳಿಸುವುದು, ಹಂಪಿ ಎಕ್ಸ್‌ಪ್ರಸ್ ರೈಲಿಗೆ 2 ಟೈರ್ ಮತ್ತು 3ಟೈರ್ ಬೋಗಿಗಳ ಹೆಚ್ಚುವರಿ ಸೇರ್ಪಡೆ, ಹೊಸಪೇಟೆಯಿಂದ ಬೆಂಗಳೂರಿಗೆ ಇಂಟರ್ ಸಿಟಿ ರೈಲು ಓಡಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ರೈಲ್ವೆ ಸಚಿವರಿಗೆ ಈಗಾಗಲೇ ಸಲ್ಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News