×
Ad

ನಕಲಿ ಪದವಿ: ಇದೀಗ ವಕೀಲರ ಸರದಿ!

Update: 2016-02-25 08:45 IST

ನವದೆಹಲಿ: ದೇಶಾದ್ಯಂತ ನಕಲಿ ವಕೀಲರನ್ನು ಪತ್ತೆ ಹಚ್ಚಿ ಕ್ಷೇತ್ರವನ್ನು ಸ್ವಚ್ಛಗೊಳಿಸುವ ಪ್ರಕ್ರಿಯೆ ದೇಶಾದ್ಯಂತ ಆರಂಭವಾಗಿದೆ. ಇದೀಗ ದೃಢೀಕರಣ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಆರಂಭಿಕವಾಗಿ ಅಂದಾಜು ಮಾಡಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಅಂದರೆ ಶೇಕಡ 30ರಷ್ಟು ವಕೀಲರು ನಕಲಿ ಪದವಿಗಳನ್ನು ಹೊಂದಿರುವುದು ಖಚಿತವಾಗಿದೆ ಎಂದು ಬಾರ್ ಕೌನ್ಸಿಲ್ ಆಫ್ ಇಂಡಿಯಾ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಹೇಳಿದ್ದಾರೆ.
ಇದೀಗ ಬಿಸಿಐ ಪ್ರಮಾಣಪತ್ರ ಮತ್ತು ಕಾರ್ಯನಿರ್ವಹಿಸುವ ಸ್ಥಳ (ದೃಢೀಕರಣ) ನಿಯಮಾವಳಿ- 2015ನ್ನು ಅನುಷ್ಠಾನಗೊಳಿಸುತ್ತಿದ್ದೇವೆ. ಹೊಸ ವಿಧಾನದಲ್ಲಿ ಮರು ನೊಂದಣಿ ಮಾಡಿಕೊಳ್ಳುವುದು ಕಡ್ಡಾಯಪಡಿಸಲಾಗಿದೆ. ಮರು ನೋಂದಣಿಯ ವೇಳೆ ವಕೀಲರು ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯಿಂದ ಹಿಡಿದು ಎಲ್ಲ ಶೈಕ್ಷಣಿಕ ಅರ್ಹತಾ ಪ್ರಮಾಣಪತ್ರಗಳನ್ನು ನೀಡುವುದು ಅನಿವಾರ್ಯ ಎಂದು ಹೇಳಿದರು.
ಈ ಪ್ರಮಾಣಪತ್ರಗಳನ್ನು ಸಂಬಂಧಿತ ವಿಶ್ವವಿದ್ಯಾನಿಲಯ ಹಾಗೂ ಮಂಡಳಿಗಳಲ್ಲಿ ತಾಳೆ ಮಾಡಲಾಗುವುದು. 2016ರ ಅಂತ್ಯದವೇಳೆಗೆ ದೃಢೀಕರಣ ಮುಗಿಯಲಿದೆ ಎಂದು ಹೇಳಿದರು. ಕಳೆದ ಐದು ವರ್ಷಗಳಲ್ಲಿ ಕಾರ್ಯನಿರ್ವಹಿಸದ ವಕೀಲರು ವಕೀಲರಾಗಿ ಮುಂದುವರಿಯುತ್ತಾರೆ. ಆದರೆ ಅವರು ಕೋರ್ಟ್‌ಗಳಿಗೆ ಹಾಜರಾಗುವಂತಿಲ್ಲ ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News