ಉತ್ತಮವಾಗಿ ಕಾರ್ಯನಿರ್ವಹಿಸಿ, ಇಲ್ಲವೇ ಕಂಪೆನಿ ತೊರೆಯಿರಿ: ನೌಕರರಿಗೆ ಸ್ನಾಪ್‌ಡೀಲ್ ತಾಕೀತು
ಹೊಸದಿಲ್ಲಿ: ಕಂಪೆನಿಯ ಅಗತ್ಯಕ್ಕೆ ತಕ್ಕಂತೆ ಕಾರ್ಯನಿರ್ವಹಿಸಿ ಅಥವಾ ಉದ್ಯೋಗವನ್ನು ತೊರೆಯಿರಿ ಎಂದು ದಿಗ್ಗಜ ಇ ಕಾಮರ್ಸ್ ಕಂಪೆನಿಯಾಗಿರುವ ಸ್ನಾಪ್‌ಡೀಲ್ ತನ್ನ 200 ನೌಕರರಿಗೆ ಖಡಕ್ ಆಗಿ ತಾಕೀತು ಮಾಡಿದೆ.
ಕೆಲಸ ನಿರ್ವಹಣೆಯಲ್ಲಿ ಸುಧಾರಿಸಿಕೊಳ್ಳಲು ಅನುಕೂಲವಾಗುವಂತೆ ಮೂವತ್ತು ದಿನಗಳ ವೌಲ್ಯಾಂಕನ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕಂಪೆನಿಯು 200 ನೌಕರರಿಗೆ ಸೂಚಿಸಿದೆ. ಇದರ ಆಧಾರದಲ್ಲಿ ಈ ನೌಕರರ ಉದ್ಯೋಗದ ಭವಿಷ್ಯವನ್ನು ಕಂಪನಿ ನಿರ್ಧರಿಸಲಿದೆ.
ಮೂಲಗಳ ಪ್ರಕಾರ ಕಂಪೆನಿ ಹೂಡಿಕೆದಾರರ ವತಿಯಿಂದ ಒತ್ತಡ ಎದುರಿಸುದ್ದು, ಕಂಪೆನಿಯು ತನ್ನ ಪ್ರದರ್ಶನವನ್ನು ಸುಧಾರಿಸಿಕೊಳ್ಳಬೇಕಾದ ಅನಿರ್ವಾಯತೆಗೆ ಸಿಲುಕಿದೆ. ಅಲ್ಲದೆ, ಪ್ರತಿಸ್ಪರ್ಧಿ ಕಂಪೆನಿಗಳಾದ ಫ್ಲಿಪ್‌ಕಾರ್ಟ್ ಹಾಗೂ ಅಮೆಝಾನ್‌ಗಳಿಂದ ತೀವ್ರ ಸ್ಪರ್ಧೆಗಳನ್ನು ಎದುರಿಸಿ ನಿಲ್ಲಬೇಕಾಗಿದೆ. ಈ ಕಾರಣದಿಂದ ಗುಡ್‌ಗಾಂವ್‌ನಲ್ಲಿ ಮುಖ್ಯಕಚೇರಿ ಹೊಂದಿರುವ ಸ್ನಾಪ್‌ಡೀಲ್‌ಕಂಪೆನಿ ಸುಮಾರು 200 ನೌಕರರ ಕಾರ್ಯಕ್ಷಮತೆಯ ವೌಲ್ಯಮಾಪನಕ್ಕೆ ಮುಂದಾಗಿದೆ. ಆ ಮೂಲಕ ಅವರ ಪ್ರದರ್ಶನದಲ್ಲಿ ಸುಧಾರಣೆ ತರುವುದು ಕಂಪೆನಿಯ ಉದ್ದೇಶವಾಗಿದೆ. ವೌಲ್ಯಾಂಕನದ ಮೂವತ್ತು ದಿನಗಳ ಅವಧಿಯಲ್ಲಿ ನೌಕರರರು ಕಂಪೆನಿ ನಿಗದಿತ ಮಾನದಂಡವನ್ನು ಪೂರ್ತಿಮಾಡಲು ವಿಫಲವಾದರೆ ಅಂತಹ ನೌಕರರನ್ನು ಉದ್ಯೋಗ ತೊರೆಯಲು ಅಥವಾ ಕೆಲಸದಲ್ಲಿ ಬದಲಾವಣೆ ಮಾಡಿಕೊಳ್ಳಲು ಸೂಚಿಸಬಹುದಾಗಿದೆ.