×
Ad

ರೈಲ್ವೆ ಬಜೆಟ್‌ ಮಂಡನೆಗೆ ಕ್ಷಣಗಣನೆ

Update: 2016-02-25 11:26 IST

ಹೊಸದಿಲ್ಲಿ, ಫೆ.25: ಕುತೂಹಲ ಕೆರಳಿಸಿರುವ 2016-17ರ ಸಾಲಿನ ರೈಲ್ವೆ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದ್ದು, ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅವರು  ಬಜೆಟ್ ಮಂಡಿಸಲಿದ್ದಾರೆ.

ಸುರೇಶ್ ಪ್ರಭು ಅವರು ಮಂಡಿಸುತ್ತಿರುವ 2ನೇ ಬಜೆಟ್ ಇದಾಗಿದೆ. ಬಜೆಟ್‌ನಲ್ಲಿ ಏನೆಲ್ಲ ಇದೆ ಎನ್ನುವ ಕುತೂಹಲ ಜನಸಾಮನ್ಯರದ್ದು. ಸಚಿವರು ಬಜೆಟ್‌ನಲ್ಲಿರುವ ಪ್ರಮುಖ ಅಂಶಗಳ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಪ್ರಭು ಸಂಕಲ್ಪ ಏನಿದೆ ಗೊತ್ತಿಲ್ಲ !
ಪ್ರಜೆಗಳು ಪ್ರಭುಗಳು ಮಂಡಿಸಲಿರುವ  ಬಜೆಟ್ ಬಗ್ಗೆ  ಅಪರಾ ನಿರೀಕ್ಷೆ ಹೊಂದಿದ್ದಾರೆ.ಬೆಂಗಳೂರಿನಲ್ಲಿ  ಇತ್ತೀಚೆಗೆ ನಡೆದ ಇನ್ವೆಸ್ಟ್ ಕರ್ನಾಟಕ ಜಾಗತಿಕ ಹೂಡಿಕೆದಾರರ ಸಮ್ಮೇಳನದಲ್ಲಿ ಸುರೇಶ್ ಪ್ರಭು ನಗರಕ್ಕೆ ಸಬರ್ಬನ್ ರೈಲು ಸೇವೆ ಒದಗಿಸುವುದಾಗಿ ಭರವಸೆ ನೀಡಿದ್ದರು. ಬೆಂಗಳೂರು-ಮೈಸೂರು ನಡುವೆ ಸ್ಪೀಡ್ ರೈಲು ಬಗ್ಗೆ ಹೇಳಿದ್ದರು ಪ್ರಯಾಣ ದರ ಏರಿಸುತ್ತಾರೋ ? ಹೊಸ ರೈಲು ಕೊಡುತ್ತಾರೋ ?ಅಥವಾ ಬರೇ  ರೈಲು ಬಿಡುತ್ತಾರೋ ?ಅವೆಲ್ಲವೂ ಬಜೆಟ್‌ನಲ್ಲಿ ಇದೆಯೋ ಎನ್ನುವ ಪ್ರಶ್ನೆಗೆ 12ಗಂಟೆಗೆ ಉತ್ತರ ದೊರೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News