ಜೈಲಿಗೆ ಸೆಲ್ಯೂಟ್ ಹೊಡೆದ ಸಂಜಯ್ ದತ್
Update: 2016-02-25 12:06 IST
ಪುಣೆ, ಫೆ.25:ಯರವಾಡಾ ಜೈಲಿನಿಂದ ಬಾಲಿವುಡ್ ನಟ ಸಂಜಯ್ ದತ್ ಬಿಡುಗಡೆಯಾಗಿ ಇಂದು ಬೆಳಗ್ಗೆ ತೆರಳುವಾಗ ಜೈಲಿಗೆ ಸೆಲ್ಯೊಟ್ ಹೊಡೆದರು. ನೆಲಮುಟ್ಟಿ ನಮಸ್ಕರಿಸಿದರು.
ಬ್ಯಾಗ್ ಮತ್ತು ಫೈಲುಗಳನ್ನು ಎತ್ತಿಕೊಂಡು ಜೈಲಿನಿಂದ ಹೊರಬಂದ ಸಂಜಯ್‌ದತ್‌ರನ್ನು ಪತ್ನಿ ಮಾನ್ಯತಾ, ಇಬ್ಬರು ಮಕ್ಕಳು , ಖ್ಯಾತ ನಿರ್ದೇಶಕ ರಾಜ್ ಕುಮಾರ್ ಇರಾನಿ ಮತ್ತಿತರರು ಬರಮಾಡಿಕೊಂಡರು. ಬಳಿಕ ವಿಮಾನದ ಮೂಲಕ ಮುಂಬೈ ತೆರಳಿದರು.
1993ರ ಮುಂಬೈ ಸರಣಿ ಬಾಂಬ್ ಸ್ಪೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಪುಣೆಯ ಯರವಾಡ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ನಟ ಸಂಜಯ್ ದತ್ ಅವರನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆಗೊಳಿಸಲಾಗಿದೆ.