ಕೇರಳ: ಜಿಮ್‌ಗಳಲ್ಲಿ ಕುದುರೆಗಳ ಇಂಜೆಕ್ಷನ್ ಬಳಕೆ! ಕೇರಳ ಪೊಲೀಸ್ ದಾಳಿಯಲ್ಲಿ ಪತ್ತೆ
ತ್ರಿಶೂರ್: ಮಸಲ್‌ಗಳು ಗಟ್ಟಿಗೊಳಿಸಲಿಕ್ಕಾಗಿ ಜಿಮ್‌ನಲ್ಲಿ ಕುದುರೆಗಳಿಗೆ ನೀಡುವ ಇಂಜೆಕ್ಷನ್ ಸೇರಿದಂತೆ ಅನಧಿಕೃತ ಮದ್ದುಗಳನ್ನು ಬಳಸುತ್ತಿರುವುದು ಪೊಲೀಸ್ ದಾಳಿಯ ವೇಳೆ ಪತ್ತೆಯಾಗಿದೆ. ಕೇರಳದಲ್ಲಿ ಶರೀರ ಪುಷ್ಟಿಗಾಗಿ ಮದ್ದುಗಳ ಜಾಲ ವ್ಯಾಪಕವಾಗಿ ಕಾರ್ಯಾಚರಿಸುತ್ತಿವೆ. ತ್ರಿಶೂರ್ ಪೊಲೀಸರು ನಡೆಸಿದ ತನಿಖೆಯಲ್ಲಿ ಒಲ್ಲೂರು ಕ್ರಿಸ್ಟೋಫರ್ ನಗರದ ಜಿಮ್‌ನಲ್ಲಿ ಕುದುರೆಗೆ ಉಪಯೋಗಿಸುವ ಇಂಜೆಕ್ಷನ್ ಮತ್ತು ಅನಧಿಕೃತ ಮದ್ದುಗಳು ಪತ್ತೆಯಾಗಿವೆ. ಜಿಮ್ ಮಾಲಕ ಹಾಗೂ ತರಬೇತುದಾರನ್ನು ಬಂಧಿಸಲಾಗಿದೆ.
ಜಿಲ್ಲಾ ಡ್ರಗ್ ಇನ್ಸ್‌ಪೆಕ್ಟರ್ ಎಂಪಿ ವಿನಯ್ ನೇತೃತ್ವದಲ್ಲಿ ಮದ್ದುಗಳ ಪರಿಶೀಲನೆ ನಡೆಸಲಾಯಿತು. ಒಲ್ಲೂರಿನ ಸ್ಪೆಶಲ್ ಬ್ರಾಂಚ್ ಪೊಲೀಸರ ವರದಿ ಪ್ರಕಾರ ಸಿಐಎ ಉಮೇಶ್, ಎಸ್ಸೈ ಪ್ರಶಾಂತ್ ಕ್ಲಿಂಟ್ ಎಂಬವರು ಪರಿಶೀಲನೆಯ ನೇತೃತ್ವವಹಿಸಿದ್ದರು.
ವೈದ್ಯರ ಸೂಚನೆ ಇಲ್ಲದೆ ಈ ಮದ್ದುಗಳ ಸೇವನೆಯಿಂದಾಗಿ ಜಿಮ್‌ಗೆ ಬರುವವರಲ್ಲಿ ಕೆಲವರು ರೋಗಿಗಳಾಗಿದ್ದಾರೆ. ಕಿಡ್ನಿ ರೋಗ ಹಾಗೂ ಶರೀರ ಉಬ್ಬುವ ರೋಗ ಕೂಡ ಆಗಿದೆ. ಆದರೆ ಇದೇ ಜಿಮ್‌ನ ಹಲವರು ಹಲವು ದೇಹದಾರ್ಢ್ಯ ಸ್ಪರ್ಧೆಗಳಲ್ಲಿ ವಿಜೇತರಾಗಿದ್ದಾರೆ. ಹದಿನಾರರಿಂದ ಇಪ್ಪತ್ತೆರಡರ ವಯೋಮಾನದ ಯುವಕರು ಪ್ರೊಟೀನ್ ಪೌಡರ್ ಸೇವಿಸಲು ಜಿಮ್ ತರಬೇತಿದಾರರು ಹಾಗೂ ಕೆಲವು ವೈದ್ಯರು ಸೂಚಿಸುತ್ತಾರೆ. ಈ ಪೌಡರ್ ಸೇವನೆಯಿಂದ ದೇಹದ ರಕ್ತನಾಳಗಳ ಅಪರಿಮಿತ ಬೆಳವಣಿಗೆ ಆಗುತ್ತವೆ. ಪ್ರೊಟೀನ್ ಪೌಡರ್‌ಗಳೊಳಗಿರುವ ಸ್ಟಿರಾಯಿಡ್‌ಗಳು ಇದಕ್ಕೆ ಕಾರಣವಾಗಿದೆ. ಇದು ಹೃದಯದ ಚಟವಟಿಕೆಯ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರುತ್ತವೆ.
ಕೇರಳ, ಬಂಗಾಲ, ಮಹಾರಾಷ್ಟ್ರ, ತಮಿಳ್ನಾಡು, ಕರ್ನಾಟಕಗಳಲ್ಲಿ ಪ್ರೊಟೀನ್ ಪೌಡರ್‌ನ ಅಮಿತ ಬಳಕೆ ಆಗುತ್ತಿದೆ. ಮೊದಲು ಕ್ರೀಡಾಳುಗಳು ಬಳಸುತ್ತಿದ್ದವುಗಳನ್ನು ಈಗ ಬೇರೆಬೇರೆ ಹೆಸರುಗಳಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತಿವೆ. ಮೂತ್ರದ ಸ್ಯಾಂಪಲ್‌ಗಳಲ್ಲಿ ಕೂಡಾ ಕಂಡುಹಿಡಿಯಲು ಸಾಧ್ಯವಿಲ್ಲದಂತೆ ಈ ಪೌಡರರ್‌ಗಳನ್ನು ನಿರ್ಮಿಸಲಾಗಿದೆ. ಐದು ವರ್ಷಗಳವರೆಗೆ ಶಿಕ್ಷೆಗೆ ಗುರಿಯಾಗುವ ಅಪರಾಧವನ್ನು ಈಗ ಬಂಧಿಸಲಾದ ಆರೋಪಿಗಳ ಮೇಲೆ ಹೊರಿಸಲಾಗಿದೆ. ಮಾತ್ರವಲ್ಲ ಕೇರಳಾದ್ಯಂತ ದಾಳಿ ನಡೆಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.