ರೈಲ್ವೆ ಬಜೆಟ್: ಪ್ರಯಾಣ ದರ , ಸರಕು ಏರಿಕೆ ಇಲ್ಲ
ಹೊಸದಿಲ್ಲಿ, ಫೆ.25:ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಇಂದು ಲೋಕಸಭೆಯಲ್ಲಿ ಮಂಡಿಸಿರುವ ರೈಲ್ವೆ ಬಜೆಟ್‌ನಲ್ಲಿ ಪ್ರಯಾಣ ದರ ಮತ್ತು ಸರಕು ಸಾಗಾಣಿಕೆ ದರ ಏರಿಕೆಯ ಪ್ರಸ್ತಾಪ ಇಲ್ಲ. ಇದು ಸಾರ್ವಜನಿಕರ ಬಜೆಟ್ ಆಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಸುರೇಶ್ ಕುಮಾರ‍್ ತಿಳಿಸಿದ್ದಾರೆ.
ಜನರ ನಿರೀಕ್ಷೆಯ ಈಡೇರಿಕೆಯ ಕಡೆಗೆ ಗಮನ ಹರಿಸಲಾಗಿದೆ. ಎಂದು ಸಚಿವ ಸುರೇಶ್ ಪ್ರಭು ಹೇಳಿದ್ದರೂ, ಮುಂದೆ ಐದು ರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮತದಾರರ ಗಮನ ಸೆಳೆಯಲು ಬಜೆಟ್ ತಯಾರಿಸಿರುವಂತೆ ಕಂಡು ಬರುತ್ತದೆ.
62 ರ ಹರೆಯದ ಚಾರ್ಟೆಡ್ ಆಕೌಂಟೆಂಟ್ ಸುರೇಶ್ ಪ್ರಭು ಎರಡನೆ ಬಾರಿ ಬಜೆಟ್ ಮಂಡಿಸಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರಕಾರದ ಮೂರನೆ ಬಜೆಟ್ ಇದಾಗಿದೆ.
ಗ್ರಾಹಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಕೆಲುವು ಯೋಜನೆಗಳನ್ನು ತಯಾರಿಸಲಾಗಿದೆ. ಕಳೆದ ಸಾಲಿನಲ್ಲಿ ಪ್ರಕಟಿಸಿದ 139 ಯೋಜನೆಗಳ ಅನುಷ್ಟಾನಕ್ಕೆ ಆದ್ಯತೆ ನೀಡಲಾಗಿದೆ ಎಂದವರು ಹೇಳಿದ್ಧಾರೆ.
ರೈಲಿಗೆ ಸ್ವಯಂಚಾಲಿತ ಬಾಗಿಲುಗಳು. ಬೇಬಿ ಸಿಟ್ಟಿಂಗ್ ಸೌಲಭ್ಯ ಮಕ್ಕಳಿಗಾಗಿ ಬಿಸಿ ನೀರು, ಅಗತ್ಯ ವಸ್ತುಗಳ ಪೂರೈಕೆ., ರೈಲಿನಲ್ಲಿ ಸಿಗುವ ಆಹಾರದ ಗುಣಮಟ್ಟ ಹೆಚ್ಚಿಸಲು ಕ್ರಮ, ವಿಲಚೇತನರಿಗೆ ಪ್ರತಿ ನಿಲ್ದಾಣಗಳಲ್ಲಿ ಪ್ರತ್ಯೇಕ ಶೌಚಾಲಯ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಸಚಿವರು ತಿಳಿಸಿದರು.
3 ಹೊಸ ರೈಲು: ಈ ಬಾರಿಯ ಬಜೆಟ್‌ನಲ್ಲಿ ಹಮ್ಸಫರರ್, ದಿ ತೇಜಸ್,ಮತ್ತು ಉದಯ್ ಎಂಬ ಮೂರು ರೈಲುಗಳನ್ನು ಘೋಷಿಸಲಾಗಿದೆ. .ಪ್ರತಿಗಂಟೆಗೆ ಗರಿಷ್ಠ 130 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ ಎಂದು ಸುರೇಶ್ ಪ್ರಭು ಮಾಹಿತಿ ನೀಡಿದರು. ಟಿಕೆಟ್ ಕಾಯ್ದಿರಿಸದ ಪ್ರಯಾಣಿಕರಿಗೆ ಅಂತ್ಯೋದಯ ಎಕ್ಸ್‌ಪ್ರೆಸ್ ರೈಲನ್ನು ಪರಿಚಯಿಸಲಾಗಿದೆ.
ವಡೋದರದಲ್ಲಿ ರೈಲು ವಿವಿ ಸ್ಥಾಪನೆ ,ಪ್ರಯಾಣಿಕರ ಅನುಕೂಲಕ್ಕಾಗಿ 182 ಹೆಲ್ಫ್ ಲೈನ್, ಗುಣಮಟ್ಟದ ಸೇವೆಗಾಗಿ ಸಂಸದರ ನಿಧಿ ಬಳಕೆ ,ವಾರಣಾಶಿ -ದೆಹಲಿ ಮಾರ್ಗದಲ್ಲಿ ಹೊಸ ರೈಲು ಓಡಾಟ, ಹಿರಿಯ ನಾಗರಿಕರಿಗೆ ಇನ್ನಷ್ಟು ಸೀಟ್‌ಗಳ ಹೆಚ್ಚಳ, ಬೆಂಗಳೂರು ಮತ್ತು ತಿರುವನಂತಪುರಕ್ಕೆ ಸಮಗ್ರ ಸಬ್ ಅರ್ಬನ್ ರೈಲು, ರೈಲು ಬೋಗಿಗಳಲ್ಲಿ ಮೊಬೈಲ್ ಚಾರ್ಜ್ ಗೆ ನೂತನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು.
17,000 ಬಯೋಟಾಯ್ಲೆಟ್ :ಸ್ವಚ್ಚ ಭಾರತ್ ಯೋಜನೆಯಡಿ 475 ನಿಲ್ದಾಣಗಳಲ್ಲಿ 17,000 ಬಯೋಟಾಯ್ಲೆಟ್ ಈ ವರುಷದ ಅಂತ್ಯದೊಳಗೆ ಆರಂಭವಾಗಲಿದೆ., ಪ್ರಸ್ತುತ ಸಾಲಿನಲ್ಲಿ 100 ನಿಲ್ದಾಣಗಳಲ್ಲಿ ವೈಫೈ ಸೌಲಭ್ಯ ಮುಂದಿನ ವರುಷ 400 ಸ್ಟೇಷನ್ ಗಳಲ್ಲಿ ವೈಫೈ ಸೇವೆ ಒದಗಿಸಲಾಗುವುದು,ಎಲ್ಲ ನಿಲ್ದಾಣಗಳಲ್ಲೂ ಸಿಸಿಟಿವಿ ವ್ಯವಸ್ಥೆ, ರೈಲು ಬೋಗಿಗಳ ಮೇಲೆ ಸೋಲಾರ್ ಪ್ಯಾನಲ್ ಅಳವಡಿಸಲಾಗುವುದು ಎಂದು ಸಚಿವ ಪ್ರಭು ಮಾಹಿತಿ ನೀಡಿದರು.
1.84 ಲಕ್ಷ ಕೋಟಿ ರೂ ಆದಾಯ ನಿರೀಕ್ಷೆ:2016-17ನೆ ಸಾಲಿನಲ್ಲಿ 1,84 ಲಕ್ಷ ಕೋಟಿ ರೂ.ಆದಾಯ ನಿರೀಕ್ಷಿಸಲಾಗಿದೆ.ಈ ವರ್ಷ 1600 ಕಿಲೋ ಮೀಟರ್ ರೈಲ್ವೆ ಮಾರ್ಗ ವಿದ್ಯುದ್ದೀಕರಣ.ರೈಲ್ವೆ ಇಲಾಖೆ ಅಭಿವೃದ್ಧಿಗಾಗಿ 8.5 ಲಕ್ಷ ಕೋಟಿ ಹೂಡಿಕೆಗೆ ನಿರ್ಧಾರ ಕೈಗೊಳ್ಳಲಾಗಿದೆ. 1.5ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಲು ಎಲ್ ಐಸಿ ಒಪ್ಪಿಕೊಂಡಿದೆ.
ಈ ವರ್ಷ 1600 ಕಿಲೋ ಮೀಟರ್ ರೈಲ್ವೆ ಮಾರ್ಗ ವಿದ್ಯುದ್ದೀಕರಣ ಮಾಡಲಾಗುವುದು. ರೈಲ್ವೆಯ ಎಲ್ಲಾ ಹುದ್ದೆಗಳಿಗೂ ಆನ್ ಲೈನ್ ಮೂಲಕ ನೇಮಕಾತಿ ಮಾಡಲಾಗುವುದು. ರೈಲ್ವೆ ಉಪಕರಣ ತಯಾರಿಸಲು ಮೇಕ್ ಇಂಡಿಯಾ ಯೋಜನೆಯಡಿ 40,000 ಕೋಟಿ ರೂ. ವೆಚ್ಚದಲ್ಲಿ 2 ಕಾರ್ಖಾನೆಗಳ ನಿರ್ಮಾಣ. 2,800 ಹೊಸ ಮಾರ್ಗಗಳ ನಿರ್ಮಾಣಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸುರೇಶ್ ಪ್ರಭು ಹೇಳಿದರು.