ಇರಾನ್ ಚುನಾವಣೆ ಸುಧಾರಣಾವಾದಿಗಳ ಮುನ್ನಡೆ
Update: 2016-02-27 23:27 IST
ಟೆಹರಾನ್, ಫೆ. 27: ಇರಾನ್‌ನಲ್ಲಿ ಶುಕ್ರವಾರ ನಡೆದ ಸಂಸದೀಯ ಚುನಾವಣೆಯ ಆರಂಭಿಕ ಫಲಿತಾಂಶದ ಪ್ರಕಾರ, ಸುಧಾರಣಾವಾದಿಗಳು ಮತ್ತು ಸೌಮ್ಯವಾದಿ ಸಂಪ್ರದಾಯವಾದಿಗಳು ಮುನ್ನಡೆ ಪಡೆದಿದ್ದಾರೆ.
ತನ್ನ ದೇಶಿ ಕಾರ್ಯಸೂಚಿಯನ್ನು ಜಾರಿಗೆ ತರಲು ಅಧ್ಯಕ್ಷ ಹಸನ್ ರೂಹಾನಿಗೆ ಸಂಸತ್ತಿನಲ್ಲಿ ಪೂರಕ ವಾತಾವರಣವನ್ನು ಇದು ರೂಪಿಸಿಕೊಡುತ್ತದೆ ಎಂದು ಭಾವಿಸಲಾಗಿದೆ.
290 ಸದಸ್ಯ ಬಲಿ ಇರಾನ್ ಸಂಸತ್ತಿನಲ್ಲಿ ಸ್ಪರ್ಧಿಸಿರುವ ಮೂರು ರಾಜಕೀಯ ಬಣಗಳ ಪೈಕಿ ಯಾರೂ ಸ್ಪಷ್ಟ ಬಹುಮತವನ್ನು ಪಡೆಯುವುದಿಲ್ಲ ಎಂಬ ಸೂಚನೆ ವ್ಯಕ್ತವಾಗಿದೆ.