ದಿಲ್ಲಿಯಲ್ಲಿ ಜರ್ಮನಿ ಯುವತಿಯ ಅತ್ಯಾಚಾರ
ಹೊಸದಿಲ್ಲಿ,ಫೆ 28: ದಿಲ್ಲಿಯ ಪ್ರಸಾದ್ ನಗರದಲ್ಲಿ ಜರ್ಮನಿ ಯುವತಿಯೊಬ್ಬಳ ಮೇಲೆ ನಡೆಸಿದ್ದ ಅತ್ಯಾಚಾರ ಪ್ರಕರಣವೊಂದು ತಡವಾಗಿಬೆಳಕಿಗೆ ಬಂದಿದೆ. ಪೀಡಿತ ಯುವತಿ ದಿಲ್ಲಿ ಮಹಿಳಾ ಆಯೋಗಕ್ಕೆ ಇಮೈಲ್ ಕಳುಹಿಸಿ ದೂರು ನೀಡಿದ ನಂತರ ಈ ಘಟನೆ ಬಹಿರಂಗವಾಗಿದೆ. ಆಟೊ ಚಾಲಕನೊಬ್ಬ ಅತ್ಯಾಚಾರ ನಡೆಸಿರುವುದುಮತ್ತು ಆತನ ಸಹಯೋಗಿಗಳು ಚುಡಾಯಿಸಿದ್ದಾಗಿ ಮಹಿಳಾ ಆಯೋಗಕ್ಕೆಇಮೈಲ್ ಕಳುಹಿಸಿ ದೂರಿಕೊಂಡ ಹಿನ್ನೆಲೆಯಲ್ಲಿ ಮಹಿಳಾಆಯೋಗ ಅವಳನ್ನು ದಿಲ್ಲಿಗೆ ಕರೆಯಿಸಿಕೊಂಡು ಪ್ರಸಾದ್ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.
ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿಮಹಿವಾಲ್‌ರ ಪ್ರಕಾರ ಫೆಬ್ರವರಿ ಐದರಂದು ಜರ್ಮನಿಯ ಹತ್ತೊಂಬತ್ತು ವರ್ಷದ ಯುವತಿಯೊಬ್ಬಳು ಇಮೈಲ್ ಕಳುಹಿಸಿ ದಿಲ್ಲಿಯಲ್ಲಿ ತನಗಾದ ಅನುಭವವನ್ನು ತೋಡಿಕೊಂಡಿದ್ದಳು ಅವರು ತಿಳಿಸಿರುವಪ್ರಕಾರಕಳೆದ ವರ್ಷ ಡಿಸೆಂಬರ್‌ನಲ್ಲಿ ದಿಲ್ಲಿಯ ಪ್ರಸಾದ್ ನಗರದಲ್ಲಿ ಜರ್ಮನಿಯ ಯುವತಿಯ ಅತ್ಯಾಚಾರ ನಡೆದಿತ್ತು. ತನ್ನ ಬಾಯ್‌ಫ್ರೆಂಡ್‌ನ ಜೊತೆ ಡಿಸೆಂಬರ್‌ನಲ್ಲಿ ಕೆಲಸದ ನಿಮಿತ್ತ ದಿಲ್ಲಿಗೆ ಬಂದಿದ್ದಾಗ ಪ್ರಸಾದ್ ನಗರದ ಹೊಟೇಲ್‌ನಲ್ಲಿ ಉಳಿದುಕೊಂಡಿದ್ದಳು. ಘಟನೆ ನಡೆದಂದು ರಾತ್ರಿ ಅವಳುಹೊಟೇಲ್‌ನಿಂದ ಹೊರಗೆ ಸುತ್ತಾಡಿ ಬರಲು ಹೊರಟಿದ್ದಳು. ಹೋಟೆಲ್‌ಗೆ ಮರಳಲು ಆಟೊವೊಂದನ್ನು ಅವಳು ಗೊತ್ತುಪಡಿಸಿದ್ದಳು. ಆಟೊ ಚಾಲಕ ನಿರ್ಜನ ಸ್ಥಳವೊಂದಕ್ಕೆ ಕರೆದುಕೊಂಡು ಹೋಗಿ ಅವಳ ಮೇಲೆ ಅತ್ಯಾಚಾರವೆಸಗಿದ್ದ. ಯಾವುದೋ ರೀತಿಯಲ್ಲಿ ಅಲ್ಲಿಂದ ತಪ್ಪಿಸಿಕೊಂಡು ಇನ್ನೊಂದು ರಸ್ತೆಗೆ ಬಂದಿದ್ದಳು. ಆದಾರಿಯಲ್ಲಿಯೂ ಅದೇ ಆಟೊ ಎದುರಾಗಿತ್ತು.ಆಗ ಬೇರೆ ಕೆಲವರಿದ್ದರು. ಅವರನ್ನು ನೋಡಿ ಯುವತಿ ಓಡಿದ್ದಳು. ಅವಳನ್ನು ಹಿಂಬಾಲಿಸಿದ ಯುವಕರುಚುಡಾಯಿಸತೊಡಗಿದ್ದರು. ಯುವತಿ ಓರ್ವ ಆರೋಪಿಯ ನಾಲಿಗೆಯನ್ನು ಕಚ್ಚಿದ್ದಾಳೆ. ಆದ ಕಾರಣ ಆರೋಪಿ ಬೊಬ್ಬೆ ಹೊಡೆಯತೊಡಗಿದ್ದ. ಗಲಾಟೆ ಹೆಚ್ಚಾದಂತೆ ಎಲ್ಲ ಆರೋಪಿಗಳು ಓಡಿಹೋಗಿದ್ದರು. ನಂತರ ಪೀಡಿತ ಯುವತಿ ಇನ್ನೊಂದು ರಸ್ತೆಗೆ ಬಂದಿದ್ದಳು. ಹೆದರಿ ಕುಳಿತಿದ್ದ ಅವಳನ್ನು ನೋಡಿದ ಓರ್ವ ಬೈಕ್ ಸವಾರ ವಿಷಯವೇನೆಂದು ವಿಚಾರಿಸಿದ್ದ ಮತ್ತು ಅವಳನ್ನು ಹೊಟೇಲ್‌ವರೆಗೆ ಕರೆತಂದು ಬಿಟ್ಟಿದ್ದ. ವಿದೇಶದಲ್ಲಿ ತನ್ನ ಮೇಲೆ ನಡೆದ ಈ ದುಷ್ಕೃತ್ಯದ ಬಗ್ಗೆ ಪೋಲೀಸ್ ದೂರು ನೀಡಲು ಅವಳು ಹೆದರಿದ್ದಳು. ಈಗ ಮಹಿಳಾ ಆಯೋಗದ ನಿರ್ದೇಶನದಂತೆ ಪೊಲೀಸರು ಅವಳ ದೂರನ್ನು ದಾಖಲಿಸಿಕೊಂಡು ಆರೋಪಿಗಳನ್ನು ಹುಡುಕುವುದರಲ್ಲಿ ನಿರತರಾಗಿದ್ದಾರೆ