ಟರ್ಕಿಯಿಂದ ಕದನ ವಿರಾಮ ಉಲ್ಲಂಘನೆ: ರಶ್ಯ
Update: 2016-02-28 23:07 IST
ಮಾಸ್ಕೊ,ಫೆ.28: ಕದ ವಿರಾಮ ಘೋಷಣೆಯಾಗಿರುವ ಸಿರಿಯದ ಪಟ್ಟಣವೊಂದರ ಮೇಲೆ ಟರ್ಕಿಯ ಪ್ರಾಂತದಿಂದ ದಾಳಿ ನಡೆದಿದ್ದು, ಈ ಬಗ್ಗೆ ವಿವರಣೆ ನೀಡುವಂತೆ ರಶ್ಯ ಅಮೆರಿಕವನ್ನು ರವಿವಾರ ಆಗ್ರಹಿಸಿದೆ.
ಟರ್ಕಿಯ ಪ್ರಾಂತದಿಂದ ಬೃಹತ್ ಪ್ರಮಾಣದ ಫಿರಂಗಿಗಳನ್ನು ಬಳಸಿಕೊಂಡು ಸಶಸ್ತ್ರ ಪಡೆಗಳು ಸಿರಿಯದ ತಾಲ್ ಅಬ್ಯಾದ್ ಪಟ್ಟಣದ ಮೇಲೆ ದಾಳಿ ನಡೆಸಿರುವ ಬಗ್ಗೆ ಸಿರಿಯದಲ್ಲಿ ರಶ್ಯದ ಸಂಧಾನ ಕೇಂದ್ರಕ್ಕೆ , ಫೆಬ್ರವರಿ 27-28ರ ಮಧ್ಯರಾತ್ರಿ ಮಾಹಿತಿ ಲಭ್ಯವಾಗಿದೆಯೆಂದು, ಲೆ.ಜ. ಸರ್ಗೆಯ ಕುರಾಲೆಂಕೊ ತಿಳಿಸಿದ್ದಾರೆ.