×
Ad

ಬಜೆಟ್‌ನ ಅನುಮೋದನೆಗೆ ಕೇಂದ್ರ ಸಚಿವ ಸಂಪುಟ ಸಭೆ ಆರಂಭ

Update: 2016-02-29 10:21 IST

ಹೊಸದಿಲ್ಲಿ, ಫೆ.29:  ಬಹು ನಿರೀಕ್ಷಿತ 2016-17ನೆ ಸಾಲಿನ ಕೇಂದ್ರ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭಗೊಂಡಿದ್ದು, , ಹಣಕಾಸು  ಸಚಿವ ಅರುಣ್ ಜೇಟ್ಲಿ ಅವರು ಸೋಮವಾರ  11ಗಂಟೆಗೆ ಸಂಸತ್ತಿನಲ್ಲಿ ಬಜೆಟ್  ಮಂಡಿಸಲಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರದ ಮೂರನೆ ಬಜೆಟ್‌ ಇದಾಗಿದೆ. ಒಂದು ರೀತಿಯಲ್ಲಿ ಇದು ಪ್ರಧಾನಿ ಮೋದಿಗೆ ಅಗ್ನಿ ಪರೀಕ್ಷೆಯಾಗಿದೆ. ಅವರು ರವಿವಾರ ನಡೆದ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಈ ವಿಚಾರ ಪ್ರಸ್ತಾಪಿಸಿ ನನಗೆ ನಾಳೆ ಪರೀಕ್ಷೆ ಇದೆ ಎಂದು ಹೇಳಿದ್ದರು.. ಈ ಕಾರಣದಿಂದಾಗಿ ಇಂದು ದೇಶಕ್ಕೆ ಅತ್ಯಂತ ಮಹತ್ವದ ದಿನ. ಜನಸಾಮಾನ್ಯರಿಂದ ಹಿಡಿದು ಉಧ್ಯಮಿಗಳವರೆಗಿನ ಎಲ್ಲ ವರ್ಗಗಳು ಜನರು ಕೂತೂಹಲದಿಂದ  ಎದುರು ನೋಡುತ್ತಿದ್ದಾರೆ.
ಬಜೆಟ್‌ ಅನುಮೋದನೆಗೆ ಕೇಂದ್ರ ಸಚಿವ ಸಂಪುಟ ಸಭೆ ಆರಂಭಗೊಂಡಿದೆ. ಸಭೆ ಬಜೆಟ್‌ಗೆ ಒಪ್ಪಿಗೆ ನೀಡಿದ ಬಳಿಕ ಬಜೆಟ್‌ ಮಂಡನೆಯಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News