ಕೇಂದ್ರ ಬಜೆಟ್ ನ ಮುಖ್ಯಾಂಶಗಳು
ಹೊಸದಿಲ್ಲಿ, ಫೆ.29: ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ 2016-17ನೇ ಸಾಲಿನ ಕೇಂದ್ರ ಬಜೆಟ್ ನ್ನು ಲೋಕಸಭೆಯಲ್ಲಿ ಇಂದು ಮಂಡಿಸಿದರು.
ಮೂರನೆ ಬಜೆಟ್ ನ್ನು 1 ಗಂಟೆ 45 ನಿಮಿಷಗಳಲ್ಲಿ ಜೇಟ್ಲಿ ಮಂಡಿಸಿದರು.
ಬಜೆಟ್ ನಲ್ಲಿರುವ ಪ್ರಮುಖ ಅಂಶಗಳು
ಬೆಲೆ ಏರಿಕೆ:ಕಾರು, ಸಿಗರೇಟ್, ಬ್ರಾಂಡೆಂಡ್ ಸಿದ್ದ ಉಡುಪು, ವಿಮಾನ ದರ, ಚಿನ್ನಾಭರಣ,ಇಂಡಸ್ಟ್ರೀಯಲ್ ಸೋಲಾರ್ ವಾಟರ್ ಹೀಟರ್, ಲೀಗಲ್ ಸರ್ವಿಸಸ್, ಲಾಟರಿ ಟಿಕೆಟ್, ಲೀಗಲ್ ಸರ್ವಿಸಸ್, ಬಾಡಿಗೆ ವಾಹನ,
ಬೆಲೆ ಇಳಿಕೆ : *ಪಾದರಕ್ಷೆ, ಸೋಲಾರ‍್ ಲ್ಯಾಂಪ್, ಡಿಜಿಟಲ್ ವಿಡಿಯೊ, ರೆಕಾರ್ಡರ್ ಮತ್ತು ಸಿಸಿ ಟಿವಿ , ಸ್ಯಾನಿಟರಿ ಪ್ಯಾಡ್ಸ್.
ಹೈಲೈಟ್ಸ್
*ಬರದ ನಿರ್ವಹಣೆಗೆ ದೀನದಯಾಲ್ ಮಿಷನ್
*ಮದ್ಯ ಬೆಲೆ ಏರಿಕೆ ಇಲ್ಲ
*ವಜ್ರ, ಚಿನ್ನಾಭರಣ ದುಬಾರಿ
*ಪೆಟ್ರೋಲ್ , ಡೀಸೆಲ್ ದರ ಏರಿಕೆ.
*ಹೊಸ ಕಂಪೆನಿಗಳ ಪ್ರಾರಂಭಕ್ಕೆ ಕೇಂದ್ರ ಸರಕಾರದ ಒತ್ತು.
*ಬೀಡಿ ಹೊರತುಪಡಿಸಿ ತಂಬಾಕು ಉತ್ಪನ್ನಗಳು ತುಟ್ಟಿ.
*ಐಷಾರಾಮಿ ಹಾಗೂ ಸಣ್ಣ ಕಾರುಗಳ ದರ ಏರಿಕೆ.
*ಐಷಾರಾಮಿ ವಾಹನಗಳ ಖರೀದಿ ಮೇಲೆ ದುಬಾರಿ ತೆರಿಗೆ
*ಎಚ್ಆರ್ ಎ ವಾರ್ಷಿಕ ಕಡಿತ 24,000 ರೂ. ನಿಂದ 60,000 ರೂ.
*ರಸ್ತೆ , ಹೈವೇ ಅಭಿವೃದ್ಧಿಗೆ 55,000 ಕೋಟಿ ರೂ.
* ಮುದ್ರಾ ಬ್ಯಾಂಕ್ ಯೋಜನೆಯಲ್ಲಿ 1,80,000 ಕೋಟಿ ರೂ. ಕ್ರೆಡಿಟ್ ಟಾರ್ಗೆಟ್
*ಬಾಡಿಗೆ ಮನೆಯಲ್ಲಿ ವಾಸವಾಗಿರುವರಿಗೆ ಸಂತಸದ ಸುದ್ದಿ. ಡಿಡಕ್ಷನ್ ಮಿತಿ 20,000 ರೂ.ಗಳಿಂದ 60 ಸಾವಿರ ರೂ.ತನಕ
*2.50 ಲಕ್ಷ ರೂ. ಆದಾಯ ಹೊಂದಿರುವವರಿಗೆ ತೆರಿಗೆ ವಿನಾಯ್ತಿ.
*ಸಣ್ಣ ತೆರಿಗೆದಾರರಿಗೆ ವಿನಾಯ್ತಿ ನೀಡಿದ ಮೋದಿ ಸರಕಾರ
*ವಷಕ್ಕೆ 5 ಲಕ್ಷ ರೂ.ಗಳಿಗಿಂತ ಕಡಿಮೆ ಆದಾಯ ಇರುವವರಿಗೆ 3 ಸಾವಿರ ರೂ. ತೆರಿಗೆ ವಿನಾಯ್ತಿ.
* ಅಂಚೆಕಚೇರಿಗಳಲ್ಲಿ ಎಟಿಎಂ, ಮೈಕ್ರೊ -ಎಟಿಎಂ ಹೆಚ್ಚಳಕ್ಕೆ ಸರಕಾರದ ಕ್ರಮ.
*ದೀನ ದಯಾಳ್ ಉಪಾಧ್ಯಾಯ , ಗುರುಗೋವಿಂದ ಸಿಂಗ್ ಜೀ ಜನ್ಮದಿನಾಚರಣೆಗೆ 100 ಕೋಟಿ ರೂ.
*50,000 ಕಿ.ಮೀ ರಾಜ್ಯ ಹೆದ್ದಾರಿಯನ್ನು ನ್ಯಾಶನಲ್ ಹೈವೇ ಆಗಿ ಮೇಲ್ದರ್ಜೆಗೇರಿಸಲು ಕ್ರಮ
*ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಗೆ 97,000 ಕೋಟಿ ರೂ.
*ಹೊಸತಾಗಿ ಉದ್ಯೋಗಕ್ಕೆ ಸೇರಿದ ಉದ್ಯೋಗಿಗಳಿಗೆ ಮೊದಲ ಮೂರು ವರುಷ ಸರಕಾರದಿಂದ ಶೇ 8.33 ಇಪಿಎಫ್ ಹಣ ಪಾವತಿ.
*ಮುಂದಿನ 2 ವರುಷಗಳಲ್ಲಿ 62 ಹೊಸ ನವೋದಯ ವಿದ್ಯಾಲಯ ಪ್ರಾರಂಭ.
*ಮೂರು ವರುಷಗಳಲ್ಲಿ ಪ್ರಧಾನ ಮಂತ್ರಿ ಕೌಶಲ ವಿಕಾಸ್ ಯೋಜನೆಯಡಿ 1 ಕೋಟಿ ರೂ. ತರಬೇತಿ ಯೋಜನೆ.
*ಪ್ರಧಾನ ಮಂತ್ರಿ ಕೌಶಲ ವಿಕಾಸ್ ಯೋಜನೆಗೆ 1700 ಕೋಟಿ .ರೂ.
*ಉನ್ನತ ಶಿಕ್ಷಣಕ್ಕೆ 1000 ಕೋಟಿ ರೂ.
*ಸ್ವಚ್ಛ ಭಾರತ ಅಭಿಯಾನಕ್ಕೆ 9,000. ಕೋಟಿ ರೂ.
*ಆರೋಗ್ಯ ರಕ್ಷಾ ಯೋಜನೆ - ಪ್ರತಿ ಕುಟುಂಬಕ್ಕೆ 1 ಲಕ್ಷ ರೂ. .
*ಗ್ರಾಮೀಣ ಅಭಿವೃದ್ಧಿಗೆ 87, 765 ಕೋಟಿ ರೂ.
*ಗ್ರಾಮೀಣ ವಿದ್ಯುತ್: 8,500 ಕೋಟಿ ರೂ.
*ಗ್ರಾಮ ಪಂಚಾಯತ್ , ಮುನ್ಸಿಪಾಲಿಟಿ ಅಭಿವೃದ್ಧಿಗೆ 2.87 ಲಕ್ಷ ಕೋಟಿ ರೂ.
*ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಗೆ 2016-17ರಲ್ಲಿ 5,500. ಕೋಟಿ ರೂ.
*ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಗೆ 19,000 ಕೋಟಿ ರೂ.
*ನೀರಾವರಿಗೆ 20,000 ಕೋಟಿ ರೂ.
* ಮೂರು ವರುಷಗಳಲ್ಲಿ 5 ಲಕ್ಷ ಎಕ್ರೆ ಪ್ರದೇಶದಲ್ಲಿ ಸಾವಯವ ಕೃಷಿ
*ಕೃಷಿ: ಕೃಷಿಗೆ 35, 984 ಕೋಟಿ ರೂ. , ಐದು ವರುಷಗಳಲ್ಲಿ ಕೃಷಿಕರ ಆದಾಯ ದ್ವಿಗುಣಗೊಳಿಸಲು ಕ್ರಮ.
*9 ಅಂಶಗಳ ಆಧಾರದಲ್ಲಿ ಕೇಂದ್ರ ಬಜೆಟ್
*ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಒತ್ತು
*19 ಸಾವಿರ ಕೋಟಿ ಕೋಟಿ ರೂ. ವೆಚ್ಚದಲ್ಲಿ ಗ್ರಾಮ ಸಡಕ್ ಯೋಜನೆ
* ರೈತರಿಗೆ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆ
*ಬಿಪಿಎಲ್ ಕುಟುಂಬಗಳಿಗೆ ಸಬ್ಸಿಡಿ ದರದಲ್ಲಿ ಅಡುಗೆ ಅನಿಲ ಪೂರೈಕೆ
*ಭಾರತದ ಅರ್ಥ ವ್ಯವಸ್ಥೆ ಸ್ಥಿರವಾಗಿದೆ.
*ಜಾಗತಿಕ ಅರ್ಥ ವ್ಯವಸ್ಥೆ ಕುಸಿದಿರುವ ವೇಳೆ ಬಜೆಟ್
ಹೈಲೈಟ್ಸ್
11:05: ಸಚಿವ ಜೇಟ್ಲಿ ಬಜೆಟ್ ಮಂಡನೆ ಶುರು.
11:00: ಲೋಕಸಭೆಯ ಕಲಾಪ ಆರಂಭ, ಸಚಿವ ಜೇಟ್ಲಿ ಬಜೆಟ್ ಮಂಡನೆ ಶುರು.
* ಕೇಂದ್ರ ಸಚಿವ ಸಂಪುಟ ಸಭೆ ಮುಕ್ತಾಯ. ಬಜೆಟ್ ಮಂಡನೆಗೆ ಅಂತಿಮ ಕ್ಷಣದ ತಯಾರಿ.
* ಬಜೆಟ್ ಗೆ ಕೇಂದ್ರ ಸಚಿವ ಸಂಪುಟದ ಅನುಮೋದನೆ.
ಹೊಸದಿಲ್ಲಿ, ಫೆ.29: ಬಹು ನಿರೀಕ್ಷಿತ 2016-17ನೆ ಸಾಲಿನ ಕೇಂದ್ರ ಬಜೆಟ್ ಮಂಡನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. , ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಸೋಮವಾರ 11ಗಂಟೆಗೆ ಸಂಸತ್ತಿನಲ್ಲಿ ಬಜೆಟ್ ಮಂಡಿಸಿದರು.